. ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ಬಸ್‌ ಶುಕ್ರವಾರ ಬೆಳಗ್ಗೆ 5.30ಕ್ಕೆ ಇಲ್ಲಿಂದ ಹೊರಬೇಕಿತ್ತು. ಬೆಳಗ್ಗೆ 5ಕ್ಕೆ ಚಾಲಕ ಎಚ್ಚರಗೊಂಡಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

ಹುಬ್ಬಳ್ಳಿ(ಜೂ.03): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇಬ್ಬರು ನಿರ್ವಾಹಕರು ನೇಣಿಗೆ ಶರಣಾಗಿರುವ ಪ್ರತ್ಯೇಕ ಘಟನೆಗಳು ಶುಕ್ರವಾರ ನಡೆದಿದೆ. 
ಬೀದರ್‌ ವಿಭಾಗದ ಬಸವಕಲ್ಯಾಣ ಘಟಕದ ನಿರ್ವಾಹಕ ಅಬ್ಬಾಸ್‌ ಅಲಿ(47) ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಬಳ್ಳಾರಿ ಉಪ ವಿಭಾಗದ ನಿರ್ವಾಹಕ ಕಾಳಪ್ಪ(45) ಆತ್ಮಹತ್ಯೆ ಮಾಡಿಕೊಂಡವರು. ಅಬ್ಬಾಸ್‌ ಅಲಿ ಅವರು ಹುಬ್ಬಳ್ಳಿ ಹೊಸ ಬಸ್‌ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಬಸ್‌ನಲ್ಲೇ ಶುಕ್ರವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ಬಸ್‌ ಶುಕ್ರವಾರ ಬೆಳಗ್ಗೆ 5.30ಕ್ಕೆ ಇಲ್ಲಿಂದ ಹೊರಬೇಕಿತ್ತು. ಬೆಳಗ್ಗೆ 5ಕ್ಕೆ ಚಾಲಕ ಎಚ್ಚರಗೊಂಡಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಕಾಳಪ್ಪ ತಾಲೂಕಿನ ಹರಗಿನಡೋಣಿ ಗ್ರಾಮದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ರಾತ್ರಿ ತಂಗುವ ಬಸ್‌ನಲ್ಲಿ ಗುರುವಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಆತ್ಮಹತ್ಯೆಗೂ ಕಾರಣ ತಿಳಿದುಬಂದಿಲ್ಲ.