ಬೆಕ್ಕಿಗೆ ಹುಷಾರಿಲ್ಲವೆಂದು ಆ್ಯಂಬುಲೆನ್ಸ್’ಗೆ ತುರ್ತು ಕರೆ

First Published 29, Jan 2018, 10:52 AM IST
Concerned woman calls 999 for help  because her cat looks sick
Highlights

ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡುವವರನ್ನು ನೋಡಿರಬಹುದು. ಆದರೆ ಬ್ರಿಟನ್‌ನಲ್ಲಿ ಬೆಕ್ಕೊಂದು ಅಸ್ವಸ್ಥಗೊಂಡಿದೆ ಎಂದು ಮಹಿಳೆಯೊಬ್ಬರು ತುರ್ತು ಸೇವೆಗೆ ಕರೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಲಂಡನ್ : ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡುವವರನ್ನು ನೋಡಿರಬಹುದು. ಆದರೆ ಬ್ರಿಟನ್‌ನಲ್ಲಿ ಬೆಕ್ಕೊಂದು ಅಸ್ವಸ್ಥಗೊಂಡಿದೆ ಎಂದು ಮಹಿಳೆಯೊಬ್ಬರು ತುರ್ತು ಸೇವೆಗೆ ಕರೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಇಂತಹ ವಿಲಕ್ಷಣ ಕರೆಗಳ ಬಗ್ಗೆ ಸರ್ಕಾರ ವರದಿ ಬಿಡುಗಡೆ ಮಾಡಿದೆ.

ಈ ಕರೆದಾಖಲೆಯಲ್ಲಿ ಕೆಲವರು ಬಾಯಿ ಒಣಗಿದಂತಾಗಿದೆ ಎಂದು ಕರೆ ಮಾಡಿದರೆ, ಇನ್ನೊಬ್ಬ ಮಹಿಳೆ ಕೃತಕ ಕಣ್ಣು ರೆಪ್ಪೆಗಳಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಕರೆ ಮಾಡಿದ್ದಾರೆ.

ಇನ್ನು ಕೆಲವರು ತರಕಾರಿ ಹೆಚ್ಚುವ ವೇಳೆ ಕೈಬೆರಳನ್ನು ಕತ್ತರಿಸಿಕೊಂಡಿದ್ದಾಗಿ ಕರೆ ಮಾಡಿದ್ದರು! ಆ್ಯಂಬುಲೆನ್ಸ್ ಸೇವೆಗೂ ಕೂಡ ಒಬ್ಬರು ಕರೆ ಮಾಡಿ ಫ್ರಿಜ್‌ನೊಳಗೆ ಇಟ್ಟ ಮೊಟ್ಟೆ ಮಧ್ಯರಾತ್ರಿ ಕೆಳಗೆ ಬಿದ್ದಿತ್ತು ಎಂದಿದ್ದರು.

loader