ನಾಯಕರುಗಳ ಅಸಮಾಧಾನ ಹೆಚ್ಚಾದಾಗ ಸಭೆಯಲ್ಲಿ ಹಾಜರಿದ್ದ ಸಂಸದ ಪ್ರತಾಪ ಸಿಂಹ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು

ಮೈಸೂರು(ಆ.29): ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸ್ಥಳೀಯ ನಾಯಕರು ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮೈಸೂರು ನಗರ, ಗ್ರಾಮಾಂತರ ಜಿಲ್ಲಾ ನಾಯಕರುಗಳು ಸಿಂಹ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು. ಜಿಲ್ಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡ ಹೋಗುವ ಕೆಲಸ ಆಗ್ತಿಲ್ಲ. ಪಕ್ಷ ಸಂಘಟನೆ, ಕಾರ್ಯಕ್ರಮ, ಹೋರಾಟ ರೂಪಿಸುವಲ್ಲಿ ಪ್ರತಾಪ ಸಿಂಹ ಹಿಂದಿದ್ದಾರೆ. ಕೇವಲ ಕೆಲವೇ ನಾಯಕರನ್ನು ಕರೆದುಕೊಂಡು ನಿರ್ಣಯ ಕೈಗೊಳ್ಳುತ್ತಾರೆ. ಅನಗತ್ಯ ಹೇಳಿಕೆ ನೀಡಿ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಬಿಎಸ್'ವೈ ಅವರಿಗೆ ದೂರು ನೀಡಿದರು.

ನಾಯಕರುಗಳ ಅಸಮಾಧಾನ ಹೆಚ್ಚಾದಾಗ ಸಭೆಯಲ್ಲಿ ಹಾಜರಿದ್ದ ಸಂಸದ ಪ್ರತಾಪ ಸಿಂಹ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್'ವೈ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 7ರಲ್ಲಿ ಗೆಲ್ಲುವ ವಾತಾವರಣ ಇದೆ. ಹೀಗಾಗಿ ಟಾರ್ಗೆಟ್ 7 ಮುಟ್ಟಲೇಬೇಕು ಎಂದು ಸೂಚನೆ ನೀಡಿದರು.