ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜನಾರ್ಧನ್ ಸಚಿವರ ಪರವಾಗಿ ವಸೂಲಿ ಮಾಡುತ್ತಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸಿ ಟೆಂಡರ್​ ನೀಡಿದ್ದಾರೆ ಅಂತಾ  ದೂರುದಾರ ಬಸವೇಗೌಡ ದೂರಿದ್ದಾರೆ.

ಲೋಕೋಪಯೋಗಿ ಸಚಿವ ಮಹದೇವಪ್ಪ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ಕೊಟ್ಯಾಂತರ ಮೌಲ್ಯದ ಟೆಂಡರ್ ನೀಡಿದ ಆರೋಪದಡಿ ಮಂಡ್ಯದ ಗುತ್ತಿಗೆದಾರ ಬಸವೇಗೌಡ ಎಸಿಬಿಗೆ ದೂರು ನೀಡಿದ್ದಾರೆ. ಸಚಿವರ ವಿರುದ್ಧ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಟೆಂಡರ್ ನೀಡಿದ್ದಾರೆ ಅಂತಾ ದೂರುದಾರ ಆರೋಪ ಮಾಡಿದ್ದಾರೆ. ಸಚಿವರ ಗಮನಕ್ಕೆ ತಂದು ಟೆಂಡರ್ ನೀಡಬೇಕೆಂದು ಸಚಿವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಆದೇಶ ಹೊರಡಿಸಿದ್ದರು. ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜನಾರ್ಧನ್ ಸಚಿವರ ಪರವಾಗಿ ವಸೂಲಿ ಮಾಡುತ್ತಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸಿ ಟೆಂಡರ್​ ನೀಡಿದ್ದಾರೆ ಅಂತಾ ದೂರುದಾರ ಬಸವೇಗೌಡ ದೂರಿದ್ದಾರೆ.