ನಮ್ಮ ಸೈನಿಕರು ದೇಶಕ್ಕಾಗಿ ಸರ್ಜಿಕಲ್ ದಾಳಿಯನ್ನು ಮಾಡಿ ಜಮ್ಮು ಕಾಶ್ಮೀರದಲ್ಲಿ ತಮ್ಮ ರಕ್ತವನ್ನು ಚೆಲ್ಲಿದ್ದಾರೆ. ಅವರ ರಕ್ತದ ಜೊತೆ ನೀವು ರಾಜಕೀಯ ಮಾಡುತ್ತಿದ್ದೀರಿ. ರಕ್ತದ ದಲ್ಲಾಳಿಯಂತೆ ವರ್ತಿಸುತ್ತಿದ್ದೀರಿ. ಇದು ಸರಿಯಲ್ಲ ಎಂದು ರಾಹುಲ್ ಹೇಳಿಕೆ ನೀಡಿದ್ದರು.

ಉತ್ತರ ಪ್ರದೇಶ (ಅ.08): ಸರ್ಜಿಕಲ್ ದಾಳಿಯ ಬಗ್ಗೆ ಕಮೆಂಟಿಸುತ್ತಾ ಪ್ರಧಾನಿ ಮೋದಿಯನ್ನು ರಕ್ತದ ದಲ್ಲಾಳಿ ಎಂದು ಕರೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಮೇಲೆ ದೂರು ದಾಖಲಿಸಲಾಗಿದೆ.

ದೆಹಲಿಯ ಜಂತರ್ ಮಂತರ್ ನಲ್ಲಿ ‘ಕಿಸಾನ್ ಯಾತ್ರಾ’ ಸಮಾರೋಪ ಸಮಾರಂಭದಲ್ಲಿ ಸೈನಿಕರ ರಕ್ತದ ಜೊತೆ ರಾಜಕೀಯ ಮಾಡುವ ಮೋದಿ ರಕ್ತದ ದಲ್ಲಾಳಿ ಎಂದು ರಾಹುಲ್ ಹೇಳಿದ್ದರು. ಇದು ದೇಶಾದ್ಯಂತ ಸಾಕಷ್ಟು ಆಕ್ರೋಶಕ್ಕೆ ಕಾರಣವಾಯಿತು.

ನಮ್ಮ ಸೈನಿಕರು ದೇಶಕ್ಕಾಗಿ ಸರ್ಜಿಕಲ್ ದಾಳಿಯನ್ನು ಮಾಡಿ ಜಮ್ಮು ಕಾಶ್ಮೀರದಲ್ಲಿ ತಮ್ಮ ರಕ್ತವನ್ನು ಚೆಲ್ಲಿದ್ದಾರೆ. ಅವರ ರಕ್ತದ ಜೊತೆ ನೀವು ರಾಜಕೀಯ ಮಾಡುತ್ತಿದ್ದೀರಿ. ರಕ್ತದ ದಲ್ಲಾಳಿಯಂತೆ ವರ್ತಿಸುತ್ತಿದ್ದೀರಿ. ಇದು ಸರಿಯಲ್ಲ ಎಂದು ರಾಹುಲ್ ಹೇಳಿಕೆ ನೀಡಿದ್ದರು.

ಇದಕ್ಕೆ ಭಾರತೀಯ ಜನತಾ ಪಕ್ಷ ತಿರುಗೇಟು ನೀಡಿದ್ದು, ರಾಹುಲ್ ಮೇಲೆ ದೂರು ದಾಖಲಿಸಲಾಗಿದೆ.