ರವಿಶಂಕರ್ ಗುರೂಜಿ ವಿರುದ್ಧ ದೂರು ದಾಖಲು

First Published 13, Mar 2018, 9:18 AM IST
Complaint against Ravi Shankar Guruji
Highlights

ಬಾಬ್ರಿ ಮಸೀದಿ ಹಾಗೂ ರಾಮಮಂದಿರ ನಿರ್ಮಾಣ ವಿಚಾರ ಹಿನ್ನೆಲೆಯಲ್ಲಿ ಶ್ರೀ  ರವಿಶಂಕರ್ ಗೂರೂಜಿ ವಿರುದ್ಧ ದೂರು ದಾಖಲಾಗಿದೆ. 

ಬೆಂಗಳೂರು (ಮಾ. 13): ಬಾಬ್ರಿ ಮಸೀದಿ ಹಾಗೂ ರಾಮಮಂದಿರ ನಿರ್ಮಾಣ ವಿಚಾರ ಹಿನ್ನೆಲೆಯಲ್ಲಿ ಶ್ರೀ  ರವಿಶಂಕರ್ ಗೂರೂಜಿ ವಿರುದ್ಧ ದೂರು ದಾಖಲಾಗಿದೆ. 

ಎರಡೂ ಧರ್ಮಗಳ ನಡುವೆ ದ್ವೇಷ ಬಿತ್ತುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ  ರವಿ ಶಂಕರ್ ಗೂರೂಜಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ  ಇಂದಿರಾನಗರ ಠಾಣೆಗೆ ಎ.ಆಲಂಪಾಷಾ ದೂರು ಸಲ್ಲಿಸಿದ್ದಾರೆ. 

ಹಿಂದೂ ಧರ್ಮೀಯರಿಗೆ ಪ್ರಚೋದನೆ, ದೋಶದ್ರೋಹದ ಆರೋಪ, ಸುಪ್ರೀಂಕೋರ್ಟ್ ಮೇಲೂ ಒತ್ತಡ ಹೇರಿದ ಆರೋಪ ಅಡಿಯಲ್ಲಿ  ರವಿ ಶಂಕರ್ ಗೂರೂಜಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ.  ಸಮಾಜದ ಸಾಮರಸ್ಯ ಹಾಳು

ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
 

loader