ಬೆಂಗಳೂರಿನ ಕೆಂಗೇರಿಯಲ್ಲಿರುವ  ಮುತ್ತೂಟ್​ ಫೈನಾನ್ಸ್ ಕಚೇರಿಯಿಂದ ಸೈರನ್ ಶಬ್ಧ ಕೇಳಿ ಗಾಬರಿಯಾದ ಸುತ್ತಮುತ್ತಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.   ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಚೇರಿಯ ಭದ್ರತಾ ಕೊಠಡಿ ಪರಿಶೀಲನೆ ನಡೆಸಿದಾಗ  ಇಲಿಯೊಂದು  ಭದ್ರತಾ ಕಪಾಟಿಗೆ ಅಳವಡಿಸಿದ್ದ  ವೈರ್ ಕಡಿದಿರುವುದು ಗಮನಕ್ಕೆ ಬಂದಿದೆ.

ಬೆಂಗಳೂರು (ಮೇ.06): ಇದು ವಿಚಿತ್ರವಾದರೂ ಸತ್ಯ! ಇಲಿಯ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.

ಆಗಿದ್ದೇನು?

ಬೆಂಗಳೂರಿನ ಕೆಂಗೇರಿಯಲ್ಲಿರುವ ಮುತ್ತೂಟ್​ ಫೈನಾನ್ಸ್ ಕಚೇರಿಯಿಂದ ಸೈರನ್ ಶಬ್ಧ ಕೇಳಿ ಗಾಬರಿಯಾದ ಸುತ್ತಮುತ್ತಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಚೇರಿಯ ಭದ್ರತಾ ಕೊಠಡಿ ಪರಿಶೀಲನೆ ನಡೆಸಿದಾಗ ಇಲಿಯೊಂದು ಭದ್ರತಾ ಕಪಾಟಿಗೆ ಅಳವಡಿಸಿದ್ದ ವೈರ್ ಕಡಿದಿರುವುದು ಗಮನಕ್ಕೆ ಬಂದಿದೆ.

4 ತಿಂಗಳ ಹಿಂದೆ ಇದೇ ರೀತಿ ಸೈರನ್ ಸದ್ದು ಮಾಡಿದ್ದರಿಂದ ಜನರು ಬೇಸತ್ತಿದ್ದರು. ಈಗ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಇಲಿಯ ವಿರುದ್ಧ ದೂರು ನೀಡಿದ್ದಾರಲ್ಲದೇ, ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.