ಹೈದರಾಬಾದ್‌ (ಅ. 27): ಮುಸ್ಲಿಂ ಎಂಬ ಕಾರಣಕ್ಕಾಗಿ ತನ್ನಿಂದ ಆಹಾರ ಸ್ವೀಕರಿಸಲು ನಿರಾಕರಿಸಿದ ಗ್ರಾಹಕನ ವಿರುದ್ಧ ಆನ್‌ಲೈನ್‌ ಆಹಾರ ಪೂರೈಕೆ ಸಂಸ್ಥೆಯೊಂದರ ಡೆಲಿವರಿ ಬಾಯ್‌ ದೂರು ದಾಖಲಿಸಿದ್ದಾರೆ. ಇಲ್ಲಿನ ನಿವಾಸಿಯಾದ ಅಜಯ್‌ ಕುಮಾರ್‌ ಎಂಬುವರು ಗ್ರಾಹಕರಿಗೆ ಆನ್‌ಲೈನ್‌ ಆಹಾರ ಪೂರೈಕೆ ಸೇವೆ ಕಲ್ಪಿಸುವ ಝೊಮ್ಯಾಟೋನಲ್ಲಿ ಆಹಾರ ಆರ್ಡರ್‌ ಮಾಡಿದ್ದರು.

ಅಮೆಜಾನ್ ದಿಢೀರ್ ನಿರ್ಧಾರ: ಸ್ವಿಗ್ಗಿ ಜೊಮ್ಯಾಟೋಗೆ ಹರಿಸಿದೆ ಬೆವರ!

ಈ ವೇಳೆ ತನಗೆ ಆಹಾರ ಪೂರೈಸುವವರು ಹಿಂದು ವ್ಯಕ್ತಿಯೇ ಆಗಿರಬೇಕು. ಯಾವುದೇ ಕಾರಣಕ್ಕೂ ಮುಸ್ಲಿಂ ವ್ಯಕ್ತಿ ಬೇಡ ಎಂದು ಕೋರಿದ್ದರು. ಆದರೆ, ಈ ಆರ್ಡರ್‌ ಮುದಾಸ್ಸರಿ ಎಂಬುವರಿಗೆ ಬಂದಿತ್ತು. ಈ ಪ್ರಕಾರ, ಮುದಾಸ್ಸರಿ ಆಹಾರ ತೆಗೆದುಕೊಂಡು ಹೋದಾಗ, ಮುಸ್ಲಿಂ ಎಂಬ ಕಾರಣಕ್ಕೆ ಆಹಾರವನ್ನು ನಿರಾಕರಿಸಿದ್ದರು. ಈ ಕುರಿತು ಮುದಾಸ್ಸರಿ ಅವರು ದೂರು ದಾಖಲಿಸಿದ್ದಾರೆ. 3 ತಿಂಗಳ ಹಿಂದಷ್ಟೇ ಝೊಮ್ಯಾಟೋ ಸಿಬ್ಬಂದಿ ಮುಸ್ಲಿಂ ಎಂಬ ಕಾರಣಕ್ಕೆ ಮಧ್ಯಪ್ರದೇಶದ ಜಬಲ್ಪುರ ಮೂಲದ ಅಮಿತ್‌ ಶುಕ್ಲಾ ಎಂಬುವರು ಆಹಾರ ಪಡೆಯಲು ನಿರಾಕರಿಸಿದ್ದರು.

ಗ್ರಾಹಕರಿಗೆ SWIGGY ಬಂಪರ್ ಕೊಡುಗೆ; ಪಿಕಪ್ ಮತ್ತು ಡ್ರಾಪ್ ಸೇವೆ ಆರಂಭ!

ಅಲ್ಲದೆ, ಮುಸ್ಲಿಂ ಸಿಬ್ಬಂದಿಯನ್ನು ತೆಗೆದುಹಾಕುವಂತೆ ಕೋರಿದ್ದರು. ಇದು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಝೊಮ್ಯಾಟೋ, ಆಹಾರಕ್ಕೆ ಯಾವುದೇ ಜಾತಿ-ಧರ್ಮ ಇಲ್ಲ. ಈ ಗ್ರಾಹಕನ ಕೋರಿಕೆಯನ್ನು ಪೂರೈಸಲಾಗದು ಎಂದು ಕಡ್ಡಿ ಮುರಿದಂತೆ ಹೇಳಿತ್ತು. ಇದು ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿತ್ತು.