ರಾಜ್ಯಪಾಲ ವಜುಬಾಯಿ ವಾಲಾ ವಿರುದ್ಧ  ಆರ್ಟಿಐ ಕಾರ್ಯಕರ್ತರೋರ್ವರು ರಾಷ್ಟ್ರಪತಿಗೆ ದೂರು ನೀಡಿದ್ದಾರೆ. 

ಬೆಂಗಳೂರು: ರಾಜ್ಯಪಾಲ ವಜುಬಾಯಿ ವಾಲಾ ವಿರುದ್ಧ ಆರ್ಟಿಐ ಕಾರ್ಯಕರ್ತರೋರ್ವರು ರಾಷ್ಟ್ರಪತಿಗೆ ದೂರು ನೀಡಿದ್ದಾರೆ. 

ಆರ್ಟಿಐ ಅಡಿಯಲ್ಲಿ ಕೇಳಿದ ಯಾವುದೇ ಮಾಹಿತಿಯನ್ನೂ ನೀಡಿಲ್ಲವೆಂದು, ಮಾಹಿತಿ ನೀಡುವಲ್ಲಿ ರಾಜ್ಯಪಾಲರು ಅಸಹಕಾರ ತೋರಿದ್ದಾರೆ ಎಂದು ನರಸಿಂಹ ಎನ್ನುವ ಕಾರ್ಯಕರ್ತರು ದೂರು ಸಲ್ಲಿಕೆ ಮಾಡಿದ್ದಾರೆ.

ಅಲ್ಲದೇ ಈಗಾಗಲೇ ಕೇಳಿರುವ ಮಾಹಿತಿಯನ್ನು ಆರ್ ಟಿಐ ಅಡಿಯಲ್ಲಿ ಕೊಡಿಸುವಂತೆಯೂ ಕೂಡ ಅವರು ಮನವಿ ಮಾಡಿದ್ದಾರೆ. ಈಗಾಗಲೇ ಆರ್ ಟಿಐ ಅಡಿ ಕೇಳಿದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರಾಜಭವನದಿಂದ ಈಗಾಗಲೇ ಐದು ಸಾವಿರ ದಂಡವನ್ನೂ ಕೂಡ ಪಾವತಿ ಮಾಡಲಾಗಿದೆ.