ಬೆಂಗಳೂರು [ಆ.08]:  ಮಾಜಿ ಸ್ಪೀಕರ್ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

2018ರಲ್ಲಿ ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಔಷಧಗಳ ಹಂಚಿಕೆ ಹಾಗೂ ಖರೀದಿಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು  ವಕೀಲ ಶಿವಾರೆಡ್ಡಿ ಎಂಬುವವರು,  ದೂರು ನೀಡಿದ್ದಾರೆ. 

ಸಿಎಜಿ ವರದಿಯಲ್ಲಿ ಆರೋಗ್ಯ ಇಲಾಖೆ ಯಡವಟ್ಟುಗಳು ಬಹಿರಂಗವಾಗಿದ್ದು,  ಮೂರು ವರ್ಷ ಔಷಧ ಖರೀದಿಯಲ್ಲಿ  ಬಹುದೊಡ್ಡ ಗೋಲ್ಮಾಲ್ ನಡೆದಿದೆ.  ಔಷಧಗಳ ಗುಣಮಟ್ಟ ಪರೀಕ್ಷೆಯಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಆಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

2014 ರಿಂದ 2017 ರವರೆಗೆ ಒಟ್ಟು 14,209  ಬ್ಯಾಚ್ ಗಳ ಔಷಧ ಖರೀದಿ ಮಾಡಲಾಗಿದೆ. ಆದರೆ ಔಷಧಗಳ ಗುಣಮಟ್ಟವನ್ನೇ ಪರೀಕ್ಷೆ ಮಾಡಿಸದ ಆರೋಗ್ಯ ಸಚಿವರು14,209 ಬ್ಯಾಚ್ ಔಷಧಗಳ ಪೈಕಿ ಕೇವಲ 6776 ಸ್ಯಾಂಪಲ್ ಗಳನ್ನು ಮಾತ್ರ ಗುಣಮಟ್ಟ ಪರೀಕ್ಷೆ ಮಾಡಿಸಿದ್ದಾರೆ. 

ಕರ್ನಾಟಕದ ಪ್ರವಾಹಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಣಮಟ್ಟ ಪರೀಕ್ಷೆಯಲ್ಲಿ 16 ಕಂಪನಿಗಳ ಔಷಧದಲ್ಲಿ ಗುಣಮಟ್ಟದ ಕೊರತೆ ಕಂಡು ಬಂದಿದೆ. ಗುಣ ಮಟ್ಟದ ಕೊರತೆ ಇರುವ ಔಷಧ ಗಳನ್ನೇ ಆಸ್ಪತ್ರೆಗೆ ಪೂರೈಕೆ ಮಾಡಲಾಗಿದೆ.  ಗುಣಮಟ್ಟವಿಲ್ಲದ ಔಷಧ ಗಳನ್ನೇ ರೋಗಿಗಳಿಗೆ ನೀಡಲಾಗಿದೆ. 

ಇದರಲ್ಲಿ ಕೇವಲ 2 ಕಂಪನಿಗಳು ಮಾತ್ರ ಬ್ಲ್ಯಾಕ್ ಲಿಸ್ಟ್ ಗೆ ಸೇರ್ಪಡೆ ಮಾಡಲಾಗಿದೆ. ಉಳಿದ 14 ಕಂಪನಿಗಳ ಕಳಪೆ ಔಷಧ ಗಳನ್ನು ಇನ್ನೂ ರೋಗಿಗಳಿಗೆ ಪೂರೈಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.