ನೋಟು ಮುದ್ರಣದಲ್ಲಿನ ಕಾರ್ಯ ಚಟುವಟಿಕೆಗಳನ್ನು ಬಹಿರಂಗಪಡಿಸುವ ಮೂಲಕ ರಾಮದಾಸ್​ ದೇಶದ ಕಾರ್ಯನೀತಿ ವಿರುದ್ಧ ವರ್ತಿಸಿದ್ದಾರೆ. ಆದ್ದರಿಂದ ರಾಮದಾಸ್​ ಹೇಳಿಕೆ ಆಧರಿಸಿ ಅವರಿಗೆ ಮಾಹಿತಿ ಸೋರಿಕೆ ಮಾಡಿದ ಆರ್​ಬಿಐ ಅಧಿಕಾರಿಗಳು, ನೌಕರರನ್ನು ಒಳಗೊಂಡಂತೆ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದಾರೆ.

ಮೈಸೂರು (ನ.22): ದೇಶಾದ್ಯಂತ ನೋಟ್​ ನಿಷೇಧವಾದ ಬಳಿಕ, ರಿಸರ್ವ್ ಬ್ಯಾಂಕಿನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಮುದ್ರಣವಾಗುತ್ತಿದ್ದದ್ದು ನನಗೆ ಮೊದಲೇ ಗೊತ್ತಿತ್ತೆಂದು ಮಾಜಿ ಸಚಿವ ಎಸ್​.ಎ. ರಾಮದಾಸ್​ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎನ್​.ಎಸ್​.ಯು.ಐ. ಘಟಕ ಕಾರ್ಯಕರ್ತರು ರಾಮದಾಸ್​ ವಿರುದ್ಧ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ.

ನೋಟು ಮುದ್ರಣದಲ್ಲಿನ ಕಾರ್ಯ ಚಟುವಟಿಕೆಗಳನ್ನು ಬಹಿರಂಗಪಡಿಸುವ ಮೂಲಕ ರಾಮದಾಸ್​ ದೇಶದ ಕಾರ್ಯನೀತಿ ವಿರುದ್ಧ ವರ್ತಿಸಿದ್ದಾರೆ. ಆದ್ದರಿಂದ ರಾಮದಾಸ್​ ಹೇಳಿಕೆ ಆಧರಿಸಿ ಅವರಿಗೆ ಮಾಹಿತಿ ಸೋರಿಕೆ ಮಾಡಿದ ಆರ್​ಬಿಐ ಅಧಿಕಾರಿಗಳು, ನೌಕರರನ್ನು ಒಳಗೊಂಡಂತೆ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದಾರೆ.

ಇನ್ನೊಂದೆಡೆ ಮಾಜಿ ಸಚಿವ ಎಸ್​.ಎ. ರಾಮದಾಸ್​ ಅವರೂ ಸಹ ಶಾಸಕ ಎಂ.ಕೆ. ಸೋಮಶೇಖರ್​ ವಿರುದ್ಧ ತಮ್ಮ ಬೆಂಬಲಿಗರ ಮೂಲಕ ದೂರು ನೀಡಿದ್ದಾರೆ. ಸೋಮಶೇಖರ್​ ಅವರು ನೋಟ್​ ನಿಷೇಧ ವಿಚಾರದಲ್ಲಿ ನಾನು ನೀಡಿದ ಹೇಳಿಕೆಯನ್ನು ತಿರುಚಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆರೋಪಿಸಿದ್ದಾರೆ.