ಟಿಪ್ಪು ಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, ಶಾಸಕ ಸಿಟಿ ರವಿ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಬೆಂಗಳೂರು (ಅ.24): ಟಿಪ್ಪು ಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, ಶಾಸಕ ಸಿಟಿ ರವಿ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಲಂ ಪಾಷರವರು 10ನೇ ಎಸಿಎಂಎಂ ಕೋರ್ಟ್'ಗೆ ಖಾಸಗಿ ದೂರು ದಾಖಲು ಮಾಡಿದ್ದಾರೆ.

ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ಪಡೆಯಲು ನಿರಾಕರಿಸಿದ್ದಾರೆ. ದೂರು ಪಡೆಯಲು ಎಸಿಪಿ ಹಾಗೂ ಡಿಸಿಪಿ ಕೂಡಾ ನಿರಾಕರಿಸಿದಾಗ ಆಲಂ ಪಾಷ ಕೋರ್ಟ್'ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ FIR ದಾಖಲಿಸಲು ನಿರ್ದೇಶನ ಕೋರಿ ದೂರು ದಾಖಲು ಮಾಡಿದ್ದಾರೆ.

ಅಕ್ಟೋಬರ್ 31 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.