ವಿವಾಹವಾದ ನವದಂಪತಿಗಳಿಗೆ ಭಾರತೀಯ ಶೈಲಿಯ ಕಮೋಡ್‌ಗಳನ್ನು ಉಡುಗೊರೆಯಾಗಿ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಕ್ನೋ[ಡಿ.19]: ವಿವಾಹ ಕಾರ್ಯಕ್ರಮದಲ್ಲಿ ನವವಧು ಮತ್ತು ವರನಿಗೆ ಅವರಿಗೆ ಇಷ್ಟವಾಗುವ ಉಡುಗೊರೆ ನೀಡುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ ಜೈಸ್ವಾಲ್‌ ಸಮಾಜವು, ಈ ವೇದಿಕೆಯಲ್ಲಿ ವಿವಾಹವಾದ ನವದಂಪತಿಗಳಿಗೆ ಭಾರತೀಯ ಶೈಲಿಯ ಕಮೋಡ್‌ಗಳನ್ನು ಉಡುಗೊರೆಯಾಗಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರಭಾವಿತಗೊಂಡ ಸಂಸ್ಥೆಯೊಂದು ಸಾಮೂಹಿಕವಾಗಿ ವಿವಾಹವಾದ ದಂಪತಿಗಳಿಗೆ ಕಮೋಡ್‌ಗಳನ್ನು ಉಡುಗೊರೆ ನೀಡಿದೆ.