ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲು ಸಿದ್ಧರಾಗಿದ್ದೀರಾ? ಹಾಗಾದ್ರೆ ಈ ಬಾರಿಯ ದೀಪಾವಳಿಯನ್ನು ಕೆಲವು ಕಟ್ಟುಪಾಡುವಿನಲ್ಲಿ ಆಚರಿಸಬೇಕಿದೆ. ಪಟಾಕಿ ಹೊಡೆಯುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ನೀತಿ-ನಿಯಮ ಜಾರಿಗೆ ತಂದಿದೆ.
ಬೆಂಗಳೂರು (ಅ.13): ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಿಸಲು ಸಿದ್ಧರಾಗಿದ್ದೀರಾ? ಹಾಗಾದ್ರೆ ಈ ಬಾರಿಯ ದೀಪಾವಳಿಯನ್ನು ಕೆಲವು ಕಟ್ಟುಪಾಡುವಿನಲ್ಲಿ ಆಚರಿಸಬೇಕಿದೆ. ಪಟಾಕಿ ಹೊಡೆಯುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ನೀತಿ-ನಿಯಮ ಜಾರಿಗೆ ತಂದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಗಳು
ನಿರ್ಜನ ಪ್ರದೇಶದಲ್ಲಿ ಪಟಾಕಿ ಹೊಡೆಯುವುದು
ಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರಿಕೆ ವಹಿಸುವುದು
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ವರೆಗೆ ಪಟಾಕಿ ಹೊಡೆಯುವುದು ನಿಷೇಧ
125 ಡಿಸಿಬಲ್ ಗಿಂತ ಹೆಚ್ಚಿನ ಶಬ್ದದ ಪಟಾಕಿ ಬಳಸುವಂತಿಲ್ಲ
ರಾತ್ರಿ 10 ಗಂಟೆ ನಂತ್ರ ಧ್ವನಿ ವರ್ಧಕ ಬಳಸುವಂತಿಲ್ಲ
ಪರಿಸರ ಮಾಲಿನ್ಯ ಆಗದಂತೆ ಹಬ್ಬ ಆಚರಿಸುವುದು
ದೀಪದಿಂದ ದೀಪ ಬೆಳಗಿಸಿ ಬೆಳಕಿನ ಹಬ್ಬ ಆಚರಿಸಿ
ಪಟಾಕಿಯೊಡೆಯುದರಿಂದ ಅತಿ ಹೆಚ್ಚು ವಾಯು ಮಾಲಿನ್ಯ, ಶಬ್ದ ಮಾಲಿನ್ಯದ ಜತೆ ಬೆಂಕಿ ಅವಘಡಗಳು ಆಗುವುದು ಸಾಮಾನ್ಯವಾಗಿದೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವೊಂದು ನಿಯಂತ್ರಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಇದಲ್ಲದೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂತ್ತೋಲೆ ಹೊರಡಿಸಿದ್ದು, ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಪ್ರತಿ ವರ್ಷವೂ ಪಟಾಕಿ ಬೆಂಕಿ ಅವಘಡದಿಂದ ಮಕ್ಕಳು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಟಾಕಿ ಕೊಡುವಾಗ ಪೋಷಕರು ಎಚ್ಚರಿಕೆ ವಹಿಸಬೇಕಿದೆ. ಬೆಳಕಿನ ಹಬ್ಬವನ್ನು ದೀಪ ಅಚ್ಚುವ ಮೂಲಕ ಆಚರಿಸಿ. ಅದಷ್ಟು ನಿರ್ಜನ ಪ್ರದೇಶದಲ್ಲಿಯೇ ಪಟಾಕಿ ಹೊಡೆಯುವುದು ಉತ್ತಮ. ಇದಲ್ಲದೆ ತಡ ರಾತ್ರಿಯಲ್ಲಿ ಪಟಾಕಿ ಹೊಡೆಯದೆ, ಕಡಿಮೆ ಡಿಸಿಬಲ್ ಹೊಂದಿದ ಪಟಾಕಿ ಸಿಡಿಸಿ ಸಂಭ್ರಮಿಸಿ ಪರಿಸರ ಸಂರಕ್ಷಣೆ ಮಾಡಿ ಎಂಬುದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮನವಿಯಾಗಿದೆ.
