* ಅಮೆರಿಕದ ಕೊಲೊರಾಡೋ ರಾಜ್ಯದ ರಾಜಧಾನಿ ಡೆನ್ವರ್ ಬಳಿ ಶೂಟೌಟ್* ಥಾರ್ನ್'ಟನ್'ನ ವಾಲ್'ಮಾರ್ಟ್ ಮಳಿಗೆಯಲ್ಲಿ ಒಬ್ಬ ವ್ಯಕ್ತಿಯಿಂದ ದಾಳಿ* ದಾಳಿಗೆ ಇಬ್ಬರು ಸಾವು; ಹಲವರಿಗೆ ಗಾಯ

ಕೊಲೊರಾಡೋ(ನ. 02): ಉಗ್ರರು ಟ್ರಕ್ ದಾಳಿ ಮೂಲಕ 8 ಮಂದಿ ಬಲಿತೆಗೆದುಕೊಂಡ ಘಟನೆ ನಡೆದ ಬೆನ್ನಲ್ಲೇ ಅಮೆರಿಕಲ್ಲಿ ಮತ್ತೊಂದು ಉಗ್ರ ದುರಂತ ಸಂಭವಿಸಿದೆ. ಪಶ್ಚಿಮ ಅಮೆರಿಕದ ಕೊಲೊರಾಡೋ ರಾಜ್ಯದ ರಾಜಧಾನಿ ಡೆನ್ವರ್ ಬಳಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಡೆನ್ವರ್ ಬಳಿಯ ಥಾರ್ನ್'ಟಾನ್ ಎಂಬಲ್ಲಿರುವ ವಾಲ್'ಮಾರ್ಟ್ ಮಳಿಗೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿದ್ದಾರೆ. ಭಾರತೀಯ ಕಾಲಮಾನದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಈ ದಾಳಿ ನಡೆದಿದೆ. ಆದರೆ, ದಾಳಿಕೋರ ಯಾರು, ಯಾಕಾಗಿ ದಾಳಿ ಮಾಡಿದ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಈ ಘಟನೆ ಬಗ್ಗೆ ಇನ್ನಷ್ಟು ವಿವರಗಳು ಸಿಗಬೇಕಿದೆ.

Add Asianetnews Kannada as a Preferred SourcegooglePreferred