ದಾವಣಗೆರೆ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಕರ್ನಲ್ ಎಂ ಬಿ ರವೀಂದ್ರನಾಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

 ಈ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಮುಂಚೂಣಿ ವಹಿಸಿದ್ದ ಎಂಬಿ ರವೀಂದ್ರನಾಥ್ ಅವರು ಸೇವಾವದಿ ಮುಗಿಸಿದ ನಂತರ ಮತ್ತೊಮ್ಮೆ ಸೇನೆ ಸೇವೆಗೆ ಸೇರಿಸಿಕೊಂಡಿದ್ದರು.

 ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹೊಳೆಸಿರಿಗೆರೆ ಗ್ರಾಮದ ಎಂ ಬಿ ರವೀಂದ್ರನಾಥ್  ಕಳೆದ ಐದಾರು ತಿಂಗಳ ಹಿಂದೆ ನಿವೃತ್ತಿಹೊಂದಿದ್ದರು.

ಇದೀಗ ಹೃದಯಾಘಾತದಿಂದ ಅವರು ಮೃತರಾಗಿದ್ದು, ಮೃತರ ಅಂತ್ಯಕ್ರಿಯೆ ನಾಳೆ ಹೊಳೆಸಿರಿಗೆರೆ ಗ್ರಾಮದಲ್ಲಿ ನಡೆಯಲಿದೆ.