ನವದೆಹಲಿ[ಜು.08]: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್ ಅಥವಾ ಇನ್‌ಸ್ಟಾ ಗ್ರಾಂನಲ್ಲಿ ಖಾತೆ ಹೊಂದಿರುವ ಎಲ್ಲ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯ ಸಾಮಾಜಿಕ ಜಾಲತಾಣ ವೇದಿಕೆಯ ಜತೆ ಸಂಪರ್ಕ ಹೊಂದುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರವು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದಿದೆ.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಉತ್ತಮ ಕೆಲಸ ಗುರುತಿಸುವ ಭಾಗವಾಗಿ ಈ ಪ್ರಯತ್ನ ಎಂದು ಸರ್ಕಾರ ಹೇಳಿದೆ. ದೇಶದ 900 ವಿಶ್ವವಿದ್ಯಾ ಲಯಗಳು ಹಾಗೂ 40 ಸಾವಿರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.

ಆದರೆ ಸರ್ಕಾರದ ಈ ನಡೆ ವಿವಾದಕ್ಕೂ ಕಾರಣವಾಗಿದೆ. ತನಗೆ ವಿರುದ್ಧವಾದ ಸಿದ್ಧಾಂತ ಹೊಂದಿದ ವಿದ್ಯಾರ್ಥಿಗಳನ್ನು ಜಾಲತಾಣಗಳ ಮೂಲಕ ಗುರುತಿಸಿ ಬೋಧಕರ ಸಂದರ್ಶನದ ವೇಳೆ ಕಡೆಗಣಿಸುವ ದುಷ್ಟ ಸಂಚು ಇದಾಗಿದೆ ಎಂದು ಕೆಲವು ವಿದ್ವಾಂಸರು ದೂರಿದ್ದು, ಸರ್ಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಸಂದರ್ಶನದ ವೇಳೆ ತಿರಸ್ಕರಿಸಲಾಗಿದೆ ಎಂಬ ದೂರಿದೆ.