ಆರ್'ಸಿ ಕಾಲೇಜ್ vs ಗ್ಯಾಸ್ ಕಾಲೇಜ್:  ವಿದ್ಯಾರ್ಥಿನಿ ವಿಷಯಕ್ಕೆ ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು(ಆ.21): ಬೆಂಗಳೂರಿನ ಕಾಲೇಜೊಂದರಲ್ಲಿ 2 ವಿದ್ಯಾರ್ಥಿ ಗುಂಪುಗಳ ನಡುವೆ ಹುಡುಗಿಯ ವಿಚಾರಕ್ಕೆ ಗ್ಯಾಂಗ್'ವಾರ್ ನಡೆದಿದೆ.

ಬೆಂಗಳೂರಿನ ಚಾಲುಕ್ಯ ಸರ್ಕಲ್ ನಲ್ಲಿರುವ ಆರ್ ಸಿ ಕಾಲೇಜಲ್ಲಿ ನಡೆದ ಗಲಾಟೆಗೆ ಒಬ್ಬ ವಿದ್ಯಾರ್ಥಿ ಹಲ್ಲೆಗೀಡಾಗಿದ್ದಾನೆ. ಹುಡುಗಿಯ ವಿಚಾರವಾಗಿ ಕಲಾ ಕಾಲೇಜಿನ ಐವರು ಹುಡುಗರು ಆರ್ ಸಿ ಕಾಲೇಜಿನ ಕ್ಯಾಂಪಸ್ ಒಳಗೆ ಬಂದಿದ್ದಾರೆ. ಈ ವೇಳೆ ಆರ್'ಸಿ ಕಾಲೇಜಿನ ಹುಡುಗರ ನಡುವೆ ಮಾತಿಗೆ ಮಾತು ಬೆಳೆದು ಎರಡೂ ಕಾಲೇಜಿನ ವಿದ್ಯಾರ್ಥಿಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಕಲಾ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಸ್ಥಳಕ್ಕೆ ಬಂದ ಹೈ ಗ್ರೌಂಡ್ಸ್ ಪೊಲೀಸರು ಗಲಾಟೆಯಲ್ಲಿ ತೊಡಗಿದ್ದ ಎರಡೂ ಕಾಲೇಜಿನ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.