ಕಚೇರಿಯ 4 ಏರ್ ಕಂಡಿಶನ್ ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ| ಜಿಲ್ಲಾಧಿಕಾರಿ ಕಾರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ| ಬಿಸಿಲಿನ ಬೆಗೆ ತಾಳಲಾರದೇ ಬಳಲುತ್ತಿರುವ ಮಕ್ಕಳು| ಅಪೌಷ್ಠಿಕ ಮಕ್ಕಳ ನೆರವಿಗೆ ಧಾವಿಸಿದ ಜಿಲ್ಲಾಧಿಕಾರಿ| ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಜಿಲ್ಲಾಧಿಕಾರಿ ಸ್ವರೋಚಿಶ್ ಸೋಮವಂಶಿ| ಕಚೇರಿಯ ಎಲ್ಲಾ ಏರ್ ಕಂಡಿಶನ್ ಗಳನ್ನು ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ ಕೊಟ್ಟ ಸೋಮವಂಶಿ|

ಉಮರಿಯಾ(ಜೂ.07): ಐಎಎಸ್ಅಧಿಕಾರಿಗಳೆಂದರೆ ಗೂಟದ ಕಾರು, ಹವಾನಿಯಂತ್ರಿತ ಕೊಠಡಿ, ಚಾಕರಿಗೆ ಆಳುಗಳ ದಂಡು ಬರೀ ಇವನ್ನಷ್ಟೇ ಕಂಡು ಕೇಳಿರುವ ನಮಗೆ, ಜನಸಾಮಾನ್ಯರಿಗಾಗಿ ತುಡಿಯುವ ಅವರ ಒಳಮನಸ್ಸಿನ ಪರಿಚಯವಿರುವುದಿಲ್ಲ.

ಸಂಕಷ್ಟ ಎಂದು ಬಂದವರಿಗೆ ಪರಿಹಾರ ಒದಗಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುವ ಸರ್ಕಾರಿ ಅಧಿಕಾರಿಗಳು ನಮ್ಮ ನಿಮ್ಮ ಮಧ್ಯೆ ಇರುವುದು ಸುಳ್ಳಲ್ಲ. ಅದರಂತೆ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿದ್ದ ಏರ್ ಕಂಡಿಶನ್‌ನ್ನು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿದ್ದಾರೆ.

Scroll to load tweet…

ಉಮರಿಯಾ ಜಿಲ್ಲಾಧಿಕಾರಿ ಸ್ವರೋಚಿಶ್ ಸೋಮವಂಶಿ ತಮ್ಮ ಕಚೇರಿಯಲ್ಲಿದ್ದ 4 ಏರ್ ಕಂಡಿಶನ್‌ಗಳನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ 4 ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಸಿಲಿನ ಉಪಟಳ ಅಧಿಕವಾಗಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಬಿಸಿಲಿನ ಬೆಗೆ ತಾಳಲಾರವು. ಈ ಕಾರಣಕ್ಕೆ ತಮ್ಮ ಕಚೇರಿಯಲ್ಲಿದ್ದ 4 ಏರ್ ಕಂಡಿಶನ್‌ಗಳನ್ನು ಪೌಷ್ಠಿಕ ಪುನರ್ವಸತಿ ಕೇಂದ್ರಗಳಿಗೆ ಉಡುಗೊರೆಯಾಗಿ ನೀಡಿರುವುದಾಗಿ ಜಿಲ್ಲಾಧಿಕಾರಿ ಸ್ವರೋಚಿಶ್ ಸ್ಪಷ್ಟಪಡಿಸಿದ್ದಾರೆ.