Asianet Suvarna News Asianet Suvarna News

500 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ಬೋಟ್ ನಾಶ!

500 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ಬೋಟ್ ನಾಶ| ಗುಜರಾತ್ ಕರಾವಳಿಯಲ್ಲಿ ನಡೆಯಿತು ಕಾರ್ಯಾಚರಣೆ| ಹೆರಾಯಿನ್ ಸಾಗಿಸುತ್ತಿದದ ಬೋಟ್ ಹೊಡೆದುರುಳಿಸಿದ ಕರಾವಳಿ ರಕ್ಷಣಾ ಪಡೆ| 9 ಇರಾನ್ ಪ್ರಜೆಗಳನ್ನು ಬಂಧಿಸಿರುವ ಕರಾವಳಿ ರಕ್ಷಣಾ ಪಡೆ| ಕಳೆದ ಮಾರ್ಚ್ 26ರಂದೇ ನಡೆದಿರುವ ಘಟನೆ| 

Coast Guard Destroy Boat Carrying Heroin
Author
Bengaluru, First Published Apr 13, 2019, 9:57 PM IST

ನವದೆಹಲಿ(ಏ.13): ಸುಮಾರು 500 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಾಣಿಕೆ ಮಾಡುತ್ತಿದ್ದ ಬೋಟ್ ವೊಂದನ್ನು ಕರಾವಳಿ ರಕ್ಷಣಾ ಪಡೆ ಹೊಡೆದುರುಳಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

500 ಕೋಟಿ ರೂ. ಮೌಲ್ಯದ ಹೆರಾಯಿನ್ ನ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಬೋಟ್ ವೊಂದನ್ನು ಹೊಡೆದುರುಳಿಸಲಾಗಿದ್ದು, 9 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಖಚಿತ ಮಾಹಿತಿ ಮೇರೆಗೆ ಗುಜರಾತ್ ಕರಾವಳಿಯಲ್ಲಿ ದಾಳಿ ಮಾಡಿ ಬೋಟ್ ನ್ನು ನಾಶಪಡಿಸಲಾಗಿದೆ ಎನ್ನಲಾಗಿದ್ದು, ಅಕ್ರಮ ಹೆರಾಯಿನ್ ನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಮಾರ್ಚ್ 26ರಂದೇ ಘಟನೆ ನಡೆದಿದ್ದು, ಒಟ್ಟು 9 ಜನ ಿರಾನ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios