ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಗೆಲುವಿನ ಭರವಸೆಯಲ್ಲಿದ್ದಾರೆ.  ಈ ಎರಡು ಕ್ಷೇತ್ರ ಮೈತ್ರಿ ತೆಕ್ಕೆಗೆ ಸಿಗಲಿದೆ  ಎಂದು ಸಚಿವರು ಭವಿಷ್ಯ ಹೇಳಿದ್ದಾರೆ. 

ಮೈಸೂರು : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇನ್ನೇನಿದ್ದರೂ ಫಲಿತಾಂಶದತ್ತ ಅಭ್ಯರ್ಥಿಗಳ ಕಾತರರಾಗಿದ್ದಾರೆ. ಅಲ್ಲದೇ ಪಕ್ಷಗಳು ಸಹ ತಮ್ಮದೇ ಗೆಲುವಿನ ಭರವಸೆಯಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಸಚಿವ ಸಾ ರಾ ಮಹೇಶ್ ಮಂಡ್ಯ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ. ಆದರೆ ಅಂತರ ಮಾತ್ರ ಕಡಿಮೆಯಾಗಬಹುದು. ಮಂಡ್ಯ ಜನರ ಮೇಲೆ ನನಗೆ ನಂಬಿಕೆ ಇದೆ ಎಂದರು. 

ಕುಮಾರಸ್ವಾಮಿಯವರ 20 ತಿಂಗಳ ಆಡಳಿಡ ನಿಖಿಲ್ ಗೆಲುವಿಗೆ ಸಹಕಾರಿಯಾಗಲಿದೆ. ಈ ಬಾರಿ ಮಂಡ್ಯದಲ್ಲಿ ಫಲಿತಾಂಶ ಬದಲಾಗಲಿದೆ ಎಂದು ಮಾತನಾಡುತ್ತಾರೆ. ಅದೆಲ್ಲವೂ ಕೂಡ ಊಹಾಪೋಹಾ. ಇದೆಲ್ಲವನ್ನೂ ಕೂಡ ನಾವು ನಂಬುವುದಿಲ್ಲ. ಇದಕ್ಕೆಲ್ಲಾ ಮೇ 23ರ ನಂತರ ಉತ್ತರ ದೊರೆಯಲಿದೆ ಎಂದು ಸಚಿವ ಸಾ ರಾ ಮಹೇಶ್ ಹೇಳಿದರು.