ಭಾರತ ಬಡ ರಾಷ್ಟ್ರವಾದರೂ, ಜಗತ್ತನ್ನೇ ಮೀರಿಸುವ ಸಂಶೋಧಕರು ಇಲ್ಲಿದ್ದಾರೆ. ಈ ನಿಟ್ಟಿನಲ್ಲಿ ದೇಶ ಹಿಂದಿನಿಂದಲೂ ವೈಜ್ಞಾನಿಕತೆಗೆ ಸಂಬಂಸಿ ಅನೇಕ ಆವಿಷ್ಕಾರಗಳನ್ನು ನಡೆಸುತ್ತಿದೆ

ಉಳ್ಳಾಲ(ಫೆ.12): ಭಾರತ ರತ್ನ ಪುರಸ್ಕೃತ, ಬೆಂಗಳೂರಿನ ಜವಾಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ ಮುಖ್ಯಸ್ಥ ಸಿ.ಎನ್.ಆರ್. ರಾವ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆ್ ಸೈನ್ಸ್’ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕುಲಾಪತಿ ವೈ. ಅಬ್ದುಲ್ಲಾ ಕುಂಞಿ ಅವರು ಡಾಕ್ಟರೇಟ್ ಪ್ರದಾನ ಮಾಡಿದರು.

ಇದೇ ವೇಳೆ ಮಾತನಾಡಿದ ರಾವ್ ಅವರು, ಭಾರತ ಬಡ ರಾಷ್ಟ್ರವಾದರೂ, ಜಗತ್ತನ್ನೇ ಮೀರಿಸುವ ಸಂಶೋಧಕರು ಇಲ್ಲಿದ್ದಾರೆ. ಈ ನಿಟ್ಟಿನಲ್ಲಿ ದೇಶ ಹಿಂದಿನಿಂದಲೂ ವೈಜ್ಞಾನಿಕತೆಗೆ ಸಂಬಂಸಿ ಅನೇಕ ಆವಿಷ್ಕಾರಗಳನ್ನು ನಡೆಸುತ್ತಿದೆ ಎಂದರು.

ವಿಜ್ಞಾನ ಎಂಬುದು ಸಮುದಾಯ. ಇದು ಜಾತಿ ಹಾಗೂ ಬಣ್ಣಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾನವನ ಜೀವನಚರಿತ್ರೆ ಅಧ್ಯಯನ ನಡೆಸುವುದರಿಂದ ಹಿಡಿದು ವಸ್ತುಗಳ ಆವಿಷ್ಕಾರವನ್ನು ಮಾನವೀಯ ನೆಲೆಯಲ್ಲಿ ಕಲ್ಪಿಸಿ, ರೂಪಿಸಿ ಜನರಲ್ಲಿ ಸೂರ್ತಿ ತುಂಬಿಸುವ ಪ್ರಯತ್ನವೇ ನೈಜ ವಿಜ್ಞಾನ ಎಂದು ಹೇಳಿದರು.