ಬಿಜೆಪಿಯ ಕೆಲ ನಾಯಕರು, ಕಾರ್ಯಕರ್ತರು ತಾಜ್‌ಮಹಲ್‌  ಬಗ್ಗೆ  ವಿವಾದ  ಮಾಡಿದ  ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್​​ಮಹಲ್​​ಗೆ ಭೇಟಿ ನೀಡಿದ್ದಾರೆ.

ನವದೆಹಲಿ (ಅ.26): ಬಿಜೆಪಿಯ ಕೆಲ ನಾಯಕರು, ಕಾರ್ಯಕರ್ತರು ತಾಜ್‌ಮಹಲ್‌ ಬಗ್ಗೆ ವಿವಾದ ಮಾಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್​​ಮಹಲ್​​ಗೆ ಭೇಟಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾದ ತಾಜ್‌ಮಹಲ್‌ಗೆ ಭೇಟಿ ಕೊಟ್ಟ ಉತ್ತರ ಪ್ರದೇಶದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಕ್ನೋನಿಂದ ಆಗ್ರಾಕ್ಕೆ ಆಗಮಿಸಿದ ಸಿಎಂ ಯೋಗಿ ತಾಜ್‌ಮಹಲ್‌ ಪಶ್ಚಿಮ ದ್ವಾರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ವಚ್ಛತಾ ಅಭಿಯಾನ ಕೈಗೊಂಡರು. 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸ್ವಚ್ಛ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸಿಎಂ ಯೋಗಿ ಪೊರಕೆ ಹಿಡಿದು ತಾಜ್‌ಮಹಲ್‌ ಆವರಣದಲ್ಲಿ ಕಸ ಗುಡಿಸಿದರು.