Asianet Suvarna News Asianet Suvarna News

ಯೋಗಿ ಆದಿತ್ಯನಾಥ್‌ಗೆ ಬೆಸ್ಟ್ ಸಿಎಂ ಪಟ್ಟ, ಅಭ್ಯಾಸ ಆರಂಭಿಸಿದ CSK ನಾಯಕ; ಆ.8ರ ಟಾಪ್ 10 ಸುದ್ದಿ!

3 ಗಂಟೆಯಲ್ಲಿ ನಡೆದ ಆಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ದಾಖಲೆ ಬರೆದಿದೆ. ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದಿದ್ದಾರೆ. ಇತ್ತ ಸೇನಾ ಕಮಾಂಡರ್‌ಗಳಿಗೆ ಯುದ್ದಕ್ಕೆ ಸಜ್ಜಾಗುವಂತೆ ಭಾರತೀಯ ಸೇನಾ ಮುಖ್ಯಸ್ಥ ಸೂಚಿಸಿದ್ದಾರೆ. ಐಪಿಎಲ್ ಟೂರ್ನಿಗೆ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಮದುವೆಯಾಗದೇ ತಾಯಿಯಾಗುತ್ತಿದ್ದಾರೆ ನಯನತಾರಾ, ಶಿವರಾಜ್ ಕುಮಾರ್ ಮನೆಗೆ ವೆಂಕಟೇಶ್ ಪ್ರಸಾದ್ ಬೇಟಿ ಸೇರಿದಂತೆ ಆಗಸ್ಟ್ 8ರ ಟಾಪ್ 10 ಸುದ್ದಿ ಇಲ್ಲಿವೆ.

CM Yogi Adityanath to MS Dhoni IPL top 10 news of August 8
Author
Bengaluru, First Published Aug 8, 2020, 5:17 PM IST

ಅಯೋಧ್ಯೆ ಭೂಮಿ ಪೂಜೆ: ಶ್ರೀರಾಮ ಭಕ್ತರಿಂದ ಅತಿ ದೊಡ್ಡ ದಾಖಲೆ, 3 ತಾಸಲ್ಲಿ ಎಲ್ಲಾ ನಡೆಯಿತು!...

CM Yogi Adityanath to MS Dhoni IPL top 10 news of August 8

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಆಗಸ್ಟ್ 5ರಂದು ನಡೆದ ಭೂಮಿ ಪೂಜೆ ಕಾರ್ಯಕ್ರಮವನ್ನು 160  ಮಿಲಿಯನ್(16 ಕೋಟಿ) ಮಂದಿ ವೀಕ್ಷಿಸಿ ರೆಕಾರ್ಡ್ ನಿರ್ಮಿಸಿದ್ದಾರೆ. ಪ್ರಸಾರ ಭಾರತಿ ಈ ಮಾಹಿತಿ ನೀಡಿದ್ದು, ಈ ಕಾರ್ಯಕ್ರಮವನ್ನು 200ಕ್ಕೂ ಅಧಿಕ ವಾಹಿನಿಗಳು ಪ್ರಸಾರ ಮಾಡಿರುವುದಾಗಿಯೂ ತಿಳಿಸಿವೆ.

ಕೇರಳ ದುರಂತ: ಅತ್ಯಂತ ಅನುಭವಿ, ರಾಷ್ಟ್ರಪತಿ ಪದಕ ಪಡೆದಿದ್ದ ಪೈಲಟ್‌ ದೀಪಕ್ ಸಾಠೆ!

CM Yogi Adityanath to MS Dhoni IPL top 10 news of August 8

ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ಕಹಿ ನೆನಪನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು, ಶುಕ್ರವಾರ ರಾತ್ರಿ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ವಿಮಾನ ದುರಂತ. ಈ ದುರಂತದಲ್ಲಿ ಪೈಲಟ್ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದು, 125 ಮಂದಿ ಗಾಯಗೊಂಡಿದ್ದಾರೆ.  ವಿಮಾನ ನಡೆಸುತ್ತಿದ್ದ ಪೈಲಟ್ ಸಂಬಂಧ ಕೆಲ ಕುತೂಹಲಕಾರಿ ಮಾಹಿತಿ ಹೊರ ಬಿದ್ದಿವೆ. ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ದೀಪಕ್ ಸಾಠೆಯವರು ರಾಷ್ಟ್ರಪತಿ ಪದಕ ಪುರಸ್ಕೃತರೂ ಹೌದು. 

ಭಾರತದ ಅತ್ಯುತ್ತಮ CM ಸಮೀಕ್ಷೆ ಫಲಿತಾಂಶ ಪ್ರಕಟ, ಸತತ 3ನೇ ಬಾರಿ ಯೋಗಿ ಆದಿತ್ಯಾನಾಥ್‌ಗೆ ಪಟ್ಟ!...

CM Yogi Adityanath to MS Dhoni IPL top 10 news of August 8

ಭಾರತದ ಮುಖ್ಯಮಂತ್ರಿ, ಸಚಿವರು, ಪ್ರಧಾನ ಮಂತ್ರಿ ಸೇರಿದಂತೆ ರಾಜಕೀಯ ನಾಯಕರಲ್ಲಿ ಯಾರು ಬೆಸ್ಟ್ ಅನ್ನೋ ಕುತೂಹಲ ಸಾಮಾನ್ಯವಾಗಿ ಇದ್ದೇ ಇರುತ್ತೆ. ಈ ಕುತೂಹಲಕ್ಕೆ ಕಳೆದ ಹಲವು ವರ್ಷಗಳಿಂದ MOTN ಸಮೀಕ್ಷೆ ನಡೆಸುತ್ತಾ ಉತ್ತರ ನೀಡಿದೆ. ಭಾರತದ ಮುಖ್ಯಮಂತ್ರಿಗಳ ಪೈಕಿ ಅತ್ಯುತ್ತಮ ಸಿಎಂ ಯಾರು ಅನ್ನೋ ಸಮೀಕ್ಷಾ ವರದಿ ಪ್ರಕಟಗೊಂಡಿದೆ. 

ಸ್ವಪ್ನಾ ಸುರೇಶ್, ಮತ್ತೊಂದು ಶಾಕಿಂಗ್ ಮಾಹಿತಿ ಬಯಲು!...

CM Yogi Adityanath to MS Dhoni IPL top 10 news of August 8

ಕೇರಳದ ಬಹುಕೋಟಿ ಅಕ್ರಮ ಚಿನ್ನ ಸಾಗಣೆ ಹಗರಣದ ರೂವಾರಿ ಸ್ವಪ್ನ ಸುರೇಶ್‌, ವಿಶ್ವಕ್ಕೇ ಚಿನ್ನ ಪೂರೈಕೆ ಮಾಡುವ ಆಫ್ರಿಕಾದ ಗಣಿಗಾರಿಕೆ ಗ್ಯಾಂಗ್‌ಗಳ ಜೊತೆಗೂ ನಂಟು ಹೊಂದಿದ್ದರು ಎಂಬ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಯಲಿಗೆಳೆದಿದೆ. ಎನ್‌ಐಎಯ ವಿಚಾರಣೆ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜೊತೆ ಸಾಮಾನ್ಯ ಸಂಪರ್ಕವಿದೆ ಎಂದು ಸ್ವಪ್ನ ಸುರೇಶ್‌ ಬಾಯ್ಬಿಟ್ಟಿದ್ದ ಬೆನ್ನಲ್ಲೇ, ಈ ಮಾಹಿತಿ ಹೊರಬಿದ್ದಿದೆ.

ಭಾರತದ ನೆತ್ತಿಯ ಮೇಲೆ ಯುದ್ಧದ ಕಾರ್ಮೋಡ?: ಕಮಾಂಡರ್‌ಗಳಿಗೆ ಸೂಚನೆ!...

CM Yogi Adityanath to MS Dhoni IPL top 10 news of August 8

ಭಾರತದ ನೆತ್ತಿಯ ಮೇಲೆ ಯುದ್ಧದ ಕಾರ್ಮೋಡವಿದೆಯಾ? ಇಂತಹುದ್ದೊಂದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಸೇನಾ ಮುಖ್ಯಸ್ಥ ಎಂ. ಎಂ. ನರವಣೆ ಸೇನಾ ಕಮಾಂಡರ್‌ಗಳಿಗೆ ನೀಡಿರುವ ಸೂಚನೆ.

ತವರಿನಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿದ ಧೋನಿ

CM Yogi Adityanath to MS Dhoni IPL top 10 news of August 8
ಸೆಪ್ಟೆಂಬರ್ 19ರಿಂದ 13ನೇ ಆವೃ​ತ್ತಿಯ ಐಪಿ​ಎಲ್‌ ಟೂರ್ನಿ ನಡೆ​ಯ​ಲಿದ್ದು, ಆ.22ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ಯುಎ​ಇಗೆ ಹೊರ​ಡ​ಲಿದೆ ಎನ್ನ​ಲಾ​ಗಿದೆ. ತಂಡದ ನಾಯಕ ಎಂ.ಎಸ್‌.ಧೋನಿ, ಇಲ್ಲಿನ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆ​ಸಿ​ದ್ದಾರೆ. ಧೋನಿ​ಗಾಗಿ ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿ​ಸ​ಲಾ​ಗಿದೆ ಎಂದು ಸಂಸ್ಥೆಯ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾರೆ. ಧೋನಿ ಬ್ಯಾಟಿಂಗ್‌ಗೆ ನೆರ​ವಾ​ಗಲು ಒಬ್ಬ ಸಹಾ​ಯಕನಿಗೆ ಮಾತ್ರ ಕ್ರೀಡಾಂಗ​ಣ​ಕ್ಕೆ ಪ್ರವೇಶ ನೀಡ​ಲಾ​ಗಿದೆ ಎಂದು ಅಧಿ​ಕಾರಿ ಹೇಳಿ​ದ್ದಾರೆ.

ನಟ ಶಿವರಾಜ್‌ಕುಮಾರ್‌ರನ್ನು ಭೇಟಿಯಾದ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್!

CM Yogi Adityanath to MS Dhoni IPL top 10 news of August 8

ಕನ್ನಡ ಚಿತ್ರರಂಗದ ಹೊಣೆ ಹೊತ್ತ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್‌ ಅವರ ನಿವಾಸಕ್ಕೆ ಗೆಳೆಯ ಮಾಜಿ ಕ್ರಿಕೆಟರ್‌ ವೆಂಕಟೇಶ್‌ ಪ್ರಸಾದ್ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿದ್ದಾರೆ...

SUV ಕಾರಿಗಿಂತ ದುಬಾರಿ ಬೆಂಟ್ಲಿ ಕಾಂಟಿನೆಂಟ್ GT ಆಟಿಕೆ ಮಾದರಿ ಕಾರು!...

CM Yogi Adityanath to MS Dhoni IPL top 10 news of August 8

ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಬೆಂಟ್ಲಿ ಇದೀಗ ತನ್ನ ಕಾಂಟಿನೆಂಟ್ GT ಕಾರಿನ ಎಲ್ಲಾ ಮಾಡೆಲ್ ಕಾರಿನ ಪ್ರತಿಕೃತಿ ಕಾರುಗಳನ್ನು ತಯಾರಿಸಿದೆ. ಶೋ ಕೇಸ್, ಸೇರಿದಂತೆ ಹಲವೆಡೆ ಪ್ರದರ್ಶನಕ್ಕಿಡುವ ಆಟಿಕೆ ಮಾದರಿಯ ಸಣ್ಣ ಕಾರು ಇದಾಗಿದ್ದು, ಬರೋಬ್ಬರಿ 300 ಗಂಟೆಗಳ ಸತತ ಪರಿಶ್ರಮದ ಮೂಲಕ ಈ ಆಟಿಕೆ ಮಾದರಿ ಕಾರು ತಯಾರಿಸಲಾಗಿದೆ. ದುಬಾರಿ ಬೆಂಟ್ಲಿ ಕಾರು ಖರೀದಿ ದೂರದ ಮಾತು, ಕೊನೇ ಪಕ್ಷ ಪ್ರತಿಕೃತಿಯನ್ನಾದರೂ ಖರೀದಿಸೋಣ ಅಂದುಕೊಂಡರೆ ಅದು ಕೂಡ ದುಬಾರಿಯಾಗಿದೆ.

ಎನ್‌ಡಿಆರ್‌ಎಫ್‌ ತಂಡದಿಂದ ಕೊಡಗಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 70 ಜನರ ರಕ್ಷಣೆ...

CM Yogi Adityanath to MS Dhoni IPL top 10 news of August 8

ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.  ಅಪಾಯದ ಸನ್ನಿವೇಶ ಎದುರಾಗಿದೆ.  ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಸುಮಾರು 70 ಜನರನ್ನು ರಕ್ಷಣೆ ಮಾಡಲಾಗಿದೆ. ಕೊಡಗಿನ ಕೊಟ್ಟಮುಡಿ ಗ್ರಾಮದಲ್ಲಿ ಜನ ಪ್ರವಾಹದಲ್ಲಿ ಸಿಲುಕಿದ್ದಾರೆ. ಕಳೆದ ವರ್ಷದ ಚಿತ್ರಣವೇ ಈ ವರ್ಷವೂ ಮರುಕಳಿಸುತ್ತಿದೆ. 

ಮದುವೆಯಾಗದೇ ತಾಯಿ ಆಗುತ್ತಿದ್ದಾರಾ ನಯನತಾರಾ?...

CM Yogi Adityanath to MS Dhoni IPL top 10 news of August 8

ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿರುವ ನಯನತಾರಾ ಮದುವೆಯಾಗುವುದಾಗಿ ಹೇಳಿ, ದಿನಾಂಕವನ್ನು ಮುಂದೂಡುತ್ತಿದ್ದಾರೆ ಅಂದಮೇಲೆ ಮಗು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ರೀಲ್‌ ಸ್ಟೋರಿಯಲ್ಲಿ ನಯನತಾರಾ ಆಯ್ಕೆ ಮಾಡಿಕೊಂಡಿರುವ ಪಾತ್ರ ಹೇಗಿದೆ ನೋಡಿ..

Follow Us:
Download App:
  • android
  • ios