ಮಕ್ಕಳಿಗಾಗಿ ಡಿವೋರ್ಸ್ ಅರ್ಜಿ ವಾಪಾಸ್ ; ರೆಹಮಾನ್-ಸಾಯಿರಾ ಬಾನು ಮತ್ತೆ ಒಂದಾಗ್ತಾರೆ?

ಹತ್ತು ದಿನಗಳ ಹಿಂದೆ ಎ.ಆರ್ ರೆಹಮಾನ್ ತಮ್ಮ ದಾಂಪತ್ಯ ಕೊನೆಯಾಗ್ತಾ ಇದೆ, ಡಿವೋರ್ಸ್​ಗೆ ಅಪ್ಲೈ ಮಾಡಿದ್ದೀನಿ ಅನ್ನೋ ವಿಚಾರ ಹಂಚಿಕೊಂಡಿದ್ರು... ರೆಹಮಾನ್ ಡಿವೋರ್ಸ್ ಕೇಸ್​​ನಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ... ಏನದು ಅಂತ ವಿಡಿಯೋ ನೋಡಿ..
 

First Published Nov 30, 2024, 12:16 PM IST | Last Updated Nov 30, 2024, 12:16 PM IST

ಇಂಡಿಯನ್ ಸಿನಿಲೋಕದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ (AR Rahman) ತಮ್ಮ ಪತ್ನಿ ಸಾಯಿರಾ ಬಾನುವಿನಿಂದ (Sairabanu) ವಿಚ್ಛೇದನ ಪಡೆಯೋದಕ್ಕೆ ಅರ್ಜಿ ಸಲ್ಲಿಸಿರೋದು ನಿಮಗೆ ಗೊತ್ತೇ ಇದೆ. ಬರೊಬ್ಬರಿ 29 ವರ್ಷಗಳ ದಾಂಪತ್ಯವನ್ನ ಮುರಿದುಕೊಳ್ಳೋದಕ್ಕೆ ಮುಂದಾಗಿರೋ ಈ ಜೋಡಿ ಬಗ್ಗೆ ಸಿಕ್ಕಾಪಟ್ಟೆ ಸದ್ದು-ಸುದ್ದಿಯಾಗಿದೆ. ಆದ್ರೆ ಈ ಸ್ಟೋರಿಯಲ್ಲೀಗ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಯಿರಾ ಪರ ವಕೀಲೆ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ಹೌದು, ರೆಹಮಾನ್ ಡಿವೋರ್ಸ್ ಕೇಸ್​​ನಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ. ಹತ್ತು ದಿನಗಳ ಹಿಂದೆ ಎ.ಆರ್ ರೆಹಮಾನ್ ತಮ್ಮ ದಾಂಪತ್ಯ ಕೊನೆಯಾಗ್ತಾ ಇದೆ, ಡಿವೋರ್ಸ್​ಗೆ ಅಪ್ಲೈ ಮಾಡಿದ್ದೀನಿ ಅನ್ನೋ ವಿಚಾರ ಹಂಚಿಕೊಂಡಿದ್ರು. ಸಾಯಿರಾ ಬಾನು ಮತ್ತು ರೆಹಮಾನ್ ರದ್ದು ಭರ್ತಿ 29 ವರ್ಷಗಳ ದಾಂಪತ್ಯ. ಇಷ್ಟು ಸುಧೀರ್ಘ ದಾಂಪತ್ಯ ಕೊನೆಯಾಗ್ತಿದೆ ಅನ್ನೋ ವಿಚಾರ ಸಖತ್ ಸದ್ದು ಮಾಡಿತ್ತು.

ರೆಹಮಾನ್ ಪತ್ನಿ ಸಾಯಿರಾ ಬಾನು ಕೂಡ ಪತಿಯ ಬಗ್ಗೆ ಒಳ್ಳೆ ಮಾತುಗಳನ್ನೇ ಆಡಿದ್ರು. ಇದೀಗ ಸಾಯಿರಾ ಬಾನು ಪರ ವಕೀಲೆ ವಂದನಾ ಶಾ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ರೆಹಮಾನ್ ಮತ್ತು ಸಾಯಿರಾ ಬಾನು ನಡುವೆ ಸಂಧಾನ ನಡೆದು ಅವ್ರು ಒಂದಾಗೋ ಚಾನ್ಸ್ ಇದೆ ಎಂದಿದ್ದಾರೆ.

ವಕೀಲೆ ವಂದನಾ ಶಾ ಸ್ಟೇಟ್​ ಮೆಂಟ್ : ರೆಹಮಾನ್ - ಸಾಯಿರಾ ಬಾನು  ಬೇರ್ಪಟ್ಟರೆ ಅವರ ಮೂವರು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಆ ಪ್ರಶ್ನೆ ಕೇಳಿದಾಗ ಅವರ ಉತ್ತರ ಬೇರೆ ರೀತಿಯೇ ಇತ್ತು. ಅವರ ಮಕ್ಕಳು ದೊಡ್ಡವರಾಗಿದ್ದಾರೆ. ಅವರಿಗೆ ತಾವು ಯಾರ ಜೊತೆ ಇರಬೇಕು ಎಂದು ತಮ್ಮ ನಿರ್ಧಾರ ತಿಳಿಸುವ ವಿವೇಚನೆ ಇದೆ. ಈ ಬಗ್ಗೆ ಇಬ್ಬರ ನಡುವೆ ಸಂಧಾನದ ಪ್ರಯತ್ನ ನಡೆಯಲಿದ್ದು ಇಬ್ಬರು ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. 

ಹೌದು ಸಂದರ್ಶನವೊಂದರಲ್ಲಿ ಎ.ಆರ್. ರೆಹಮಾನ್ ಮತ್ತು ಸಾಯಿರಾ ಡಿವೋರ್ಸ್ ಬಗ್ಗೆ ಮಾತನಾಡಿರೋ ವಕೀಲೆ ವಂದನಾ ಶಾ ಇಬ್ಬರು ಮಕ್ಕಳಿಗೋಸ್ಕರ ಅವ್ರು ಮತ್ತೆ ಒಂದಾಗೋ ಚಾನ್ಸ್ ಇದೆ ಅಂತ ಹೇಳಿದ್ದಾರೆ.

ಸಾಮಾನ್ಯವಾಗಿ ದಂಪತಿಗಳು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದಾಗ ಕೋರ್ಟ್ ಇಬ್ಬರ ನಡುವೆ ಸಂಧಾನಕ್ಕೆ ಮೊದಲ ಆದ್ಯತೆ ಕೊಡುತ್ತೆ. ಪತಿ- ಪತ್ನಿಯನ್ನ ಕರೆದು ಕೌನ್ಸಲಿಂಗ್ ಮಾಡಲಾಗುತ್ತೆ. ಈ ಕೌನ್ಸ್​ಲಿಂಗ್​ನಲ್ಲಿ ಸಮಸ್ಯೆಗಳು ಬಗೆಹರಿದು ಅನೇಕ ದಂಪತಿಗಳು ಒಂದಾದ ಉದಾಹರಣೆ ಇವೆ.

ಒಟ್ಟಾರೆ ರೆಹಮಾನ್ ದಾಂಪತ್ಯದಲ್ಲಿ ಅಪಸ್ವರ ಮೂಡಿದ್ದನ್ನ ನೋಡಿ ಫ್ಯಾನ್ಸ್ ಬೇಸರಿಸಿಕೊಂಡಿದ್ರು. ಇದೀಗ ಇವರಿಬ್ಬರೂ ಮತ್ತೆ ಒಂದಾಗೋ ಚಾನ್ಸ್ ಇದೆ ಅನ್ನೋದನ್ನ ಕೇಳಿ ಖುಷಿಯಾಗಿದ್ದಾರೆ. ತಪ್ಪಿದ ತಾಳ.. ಸರಿಯಾಗಲಿ.. ಸಂಗೀತ ಮಾಂತ್ರಿಕನ ಲೈಫು ಸರಿಹೋಗಲಿ ಅಂತ ಹಾರೈಸ್ತಾ ಇದ್ದಾರೆ.

Video Top Stories