ಲಂಡನ್(ಆ.08): ಬೆಂಟ್ಲಿ ಕಾರುಗಳು ಐಷಾರಾಮಿ ಜೀವನಕ್ಕೆ ಹೇಳಿದ ಕಾರು. ದುಬಾರಿ ಬೆಲೆಯ ಈ ಕಾರುಗಳು ಜನಸಾಮಾನ್ಯರಿಗೆ ಖರೀದಿ ಕಷ್ಟ. ಕಾರಣ ಬೆಂಟ್ಲಿ ಕಾರುಗಳ ಆರಂಭಿಕ ಬೆಲೆಯೇ ಕೋಟಿ ಕೋಟಿ ರೂಪಾಯಿ. ಬೆಂಟ್ಲಿ ಬೆಂಟೆಯಾಗ್ ಸೇರಿದಂತೆ ಕೆಲ ಬೆಂಟ್ಲಿ ಮಾಡೆಲ್ ಕಾರುಗಳು ಮುಖೇಶ್ ಅಂಬಾನಿ ಸೇರಿದಂತೆ ಭಾರತದ ಶ್ರೀಮಂತರಲ್ಲಿವೆ. ಇದೀಗ ಬೆಂಟ್ಲಿ ಕಾಂಟಿನೆಂಟ್ ಜಿಟಿ ಕಾರಿನ ಮಾಡೆಲ್‌ ಪ್ರತಿಕೃತಿಯನ್ನು ತಯಾರಿಸಿ ತನ್ನ ಅಧಿಕೃತ ಡೀಲರ್ ಶೋ ರೂಂಗಳಲ್ಲಿ ಮಾರಾಟಕ್ಕಿಟ್ಟಿದೆ. ಇದರ ಬೆಲೆ ಕೂಡ ತಲೆತಿರುಗುವಂತಿದೆ.

ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು!

78 ಸೆಂಟಿಮೀಟರ್ ಉದ್ದ, 40 ಸೆಂಟಿಮೀಟರ್ ಅಗಲ ಹಾಗೂ 24.4 ಸೆಂಟಿಮೀಟರ್ ಎತ್ತರವಿರುವ ಈ ಸಣ್ಣ ಆಟಿಕೆ ಮಾದರಿ ಕಾರು ಮನೆಯ ಶೋ ಕೇಸ್, ಪ್ರದರ್ಶನ ಸಂಗ್ರಹಾಲಯ, ಕಾರಿನ ಒಳಭಾಗ ಸೇರಿದಂತೆ ಕೆಲೆವೆಡೆ ಪ್ರದರ್ಶನ ವಸ್ತುವಾಗಿಡಲು ಸೂಕ್ತ. ಟಾಯ್ ಮಾಡೆಲ್ ಬೆಂಟ್ಲಿ ಕಾರುಗಳನ್ನು ಬರೋಬ್ಬರಿ 300 ಗಂಟೆಗಳ ಸತತ ಪರಿಶ್ರಮದಲ್ಲಿ ತಯಾರಿಸಲಾಗಿದೆ.

ಬೆಂಟ್ಲಿ ಬೆಂಟೆಯಾಗ to ಬೆಂಝ್: ದುಬೈ ಪೊಲೀಸರ ದುಬಾರಿ 'ಕಾರು'ಬಾರು!.

1000 ತುಣುಕುಗಳನ್ನು ಕೈಯಿಂದ ಜೋಡಿಸಿ, ನಾಜೂಕಾಗಿ ಈ ರೆಪ್ಲಿಕಾ ಕಾರುಗಳನ್ನು ತಯಾರಿಸಲಾಗಿದೆ. ಕಾರು ಚಿಕ್ಕ ಆಟಿಕೆ ಗಾತ್ರದಲ್ಲಿದ್ದರೂ, ನೈಜ ಕಾರಿನ ಎಲ್ಲಾ ಫೀಚರ್ಸ್, ಆಲೋಯ್ ವೀಲ್ಹ್, ಸ್ಟೇರಿಂಗ್, ಚಕ್ರ, ಹೆಡ್‌ಲ್ಯಾಂಪ್ಸ್ ಸೇರಿದಂತೆ ಎಲ್ಲಾ ವಿಚಾರದಲ್ಲಿ ಅಷ್ಟೇ ಮುತುವರ್ಜಿ ವಹಿಸಲಾಗಿದೆ. ಪ್ರತಿಯೊಂದು ಸೂಕ್ಷ್ಮ ವಿಚಾರವನ್ನು ಅಷ್ಟೇ ಅಚ್ಚುಕಟ್ಟಾಗಿ ಆಟಿಕೆ ಮಾದರಿ ಕಾರಿನಲ್ಲಿ ಜೋಡಿಸಲಾಗಿದೆ.

ಕಾರಿನ ಇಂಟೀರಿಯರ್ ಕೂಡ ಸ್ಪಷ್ಟವಾಗಿದೆ. ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಡ್ಯಾಶ್ ಬೋರ್ಡ್ ಎಲ್ಲವೂ ಅಚ್ಚುಕಟ್ಟಾಗಿದೆ. ಟಾಯ್ ಮಾಡೆಲ್ ಕಾರಿನಲ್ಲೂ 3 ವೇರಿಯೆಂಟ್ ಕಾರುಗಳನ್ನು ಜೋಡಿಸಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 1.8 ಮಾಡೆಲ್ ಟಾಯ್ ಕಾರಿನ ಬೆಲೆ £6,995. ಭಾರತೀಯ ರೂಪಾಯಿಗಳಲ್ಲಿ 7 ಲಕ್ಷ ರೂಪಾಯಿ. ಈ ಬೆಲೆಗೆ ಭಾರತದಲ್ಲಿ SUV ಕಾರು ಲಭ್ಯವಾಗುತ್ತಿದೆ.