ಅಯೋಧ್ಯೆ ಭೂಮಿ ಪೂಜೆ: ಶ್ರೀರಾಮ ಭಕ್ತರಿಂದ ಅತಿ ದೊಡ್ಡ ದಾಖಲೆ, 3 ತಾಸಲ್ಲಿ ಎಲ್ಲಾ ನಡೆಯಿತು!
ಭವ್ಯ ರಾಮ ಮಂದಿರಕ್ಕೆ ಪಿಎಂ ಮೋದಿಯಿಂದ ಶಿಲಾನ್ಯಾಸ| ಐದು ಶತಮಾನದ ಕನಸು ಸಾಕಾರಗೊಳ್ಳುವುದರಂದಿಗೆ ಮತ್ತೊಂದು ದಾಖಲೆ ಬರೆದ ಕಾಋfಯಕ್ರಮ| ಶ್ರೀರಾಮ ಭಕ್ತರಿಂದ ವಿನೂತನ ದಾಖಲೆ
ಅಯೋಧ್ಯೆ(ಆ.08): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಆಗಸ್ಟ್ 5ರಂದು ನಡೆದ ಭೂಮಿ ಪೂಜೆ ಕಾರ್ಯಕ್ರಮವನ್ನು 160 ಮಿಲಿಯನ್(16 ಕೋಟಿ) ಮಂದಿ ವೀಕ್ಷಿಸಿ ರೆಕಾರ್ಡ್ ನಿರ್ಮಿಸಿದ್ದಾರೆ. ಪ್ರಸಾರ ಭಾರತಿ ಈ ಮಾಹಿತಿ ನೀಡಿದ್ದು, ಈ ಕಾರ್ಯಕ್ರಮವನ್ನು 200ಕ್ಕೂ ಅಧಿಕ ವಾಹಿನಿಗಳು ಪ್ರಸಾರ ಮಾಡಿರುವುದಾಗಿಯೂ ತಿಳಿಸಿವೆ.
ರಾಮ ಮಂದಿರ ಶಂಕು ಸ್ಥಾಪನೆ: ಅಮೆರಿಕದಲ್ಲಿ ಹೆಚ್ಚು ವೀಕ್ಷಣೆ
10.45ರಿಂದ 2 ಗಂಟೆವರೆಗೆ ಪ್ರಸಾರ
ಸಾರ್ವಜನಿಕ ಸೇವಾ ಪ್ರಸಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿ ಶೇಖರ್ ಟ್ವೀಟ್ ಮಾಡುತ್ತಾ ಈ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ದೂರದರ್ಶನದ ಮೂಲಕ ಈ ಕಾರ್ಯಕರಮದ ಲೈವ್ 160 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇದು ಆಗಸ್ಟ್ 5 ರಂದು ಬೆಳಗ್ಗೆ 10.45ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆದಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಶಿಲ್ಯಾನ್ಯಾಸ ನಡೆಸಿದ್ದರೆಂದೂ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ನತದೃಷ್ಟ ನಾಯಕ ಅಡ್ವಾಣಿ
ಪಿಎಂ ಮೋದಿ ಭಾಷಣ ಬೇರೆ ಭಾಷೆಯಲ್ಲಿ ಅನುವಾದ
ಪ್ರಸಾರ ಭಾರತಿ ಅಯೋಧ್ಯೆಯ ಈ ಕಾರ್ಯಕ್ರಮದ ವ್ಯಾಪಕ ಕವರೇಜ್‌ಗೆ ಯೋಜನೆ ನಿರ್ಮಿಸಿತ್ತು. ಹೀಗಾಗಿ ಅಯೋಧ್ಯೆಯ ಈ ಕಾರ್ಯಕ್ರಮದ ಹಿಂದಿನ ಸಂಜೆ ಸರಯೂ ದಂಡೆ ಮಾತ್ರವಲ್ಲದೇ ಭೂಮಿ ಪೂಜೆಯ ದಿನ ಬೆಳಗ್ಗೆ ಆರು ಗಂಟೆಯಿಂದ ಅಯೋಧ್ಯೆಯ್ಲಿ ನಡೆಯುತ್ತಿದ್ದ ಕೊನೆಯ ತಯಾರಿಯ ಒಂದು ವಿಶೇಷ ಲೈವ್ ಶೋ ಕೂಡಾ ಪ್ರಸಾರ ಮಾಡಿತ್ತು. ಕಾರ್ಯಕ್ರಮ ಮುಕ್ತಾಯದ ಬಳಿಕವೂ ಪ್ರಸಾರ ಭಾರತಿ ಪಿಎಂ ಮೋದಿ ಭಾಷೆಗಳಲ್ಲಿ ಭಾಆಂತರಗೊಳಿಸಿಯೂ ಪ್ರಸಾರ ಮಾಡಿತ್ತು.