ದಸರಾ ವೇಳೆ ಚಾಮುಂಡೇಶ್ವರಿಗೆ ಎರಡೆರಡು ಸೀರೆ ಉಡಿಸಲಾಗಿದೆ ಎನ್ನಲಾಗಿದ್ದು, ಸೀರೆ ವಿವಾದದಲ್ಲಿ‌ ಸಿಎಂ ಪತ್ನಿ ಪಾರ್ವತಿ ಸಿಲುಕಿದ್ದಾರೆ.

ಬೆಂಗಳೂರು (ಅ.02): ದಸರಾ ವೇಳೆ ಚಾಮುಂಡೇಶ್ವರಿಗೆ ಎರಡೆರಡು ಸೀರೆ ಉಡಿಸಲಾಗಿದೆ ಎನ್ನಲಾಗಿದ್ದು, ಸೀರೆ ವಿವಾದದಲ್ಲಿ‌ ಸಿಎಂ ಪತ್ನಿ ಪಾರ್ವತಿ ಸಿಲುಕಿದ್ದಾರೆ.

ದೇವಿ ವಿಗ್ರಹಕ್ಕೆ ಎರಡು ಸೀರೆ‌ ಉಡಿಸಲಾಗಿದ್ದು, ಮೇಯರ್ ತಾವು ಕೊಟ್ಟ ಸೀರೆಯ ಮೇಲೆ ಸಿಎಂ ಪತ್ನಿ ಪಾರ್ವತಿ ಪ್ರಭಾವ ಬಳಸಿ ಸೀರೆ ಉಡಿಸಿದ್ದಾರೆ ಎಂದಿದ್ದಾರೆ ಎಂದು ಆರೋಪಿಸಿದ್ದಾರೆ. ದಸರಾ ಜಂಬೂ ಸವಾರಿ ದಿನ ದೇವಿ ವಿಗ್ರಹಕ್ಕೆ ಎರಡು ಸೀರೆ ಉಡಿಸಲಾಗಿದ್ದು, ಮೇಯರ್ ನೀಡಿದ್ದ ನಾಲ್ಕು ಸೀರೆ ಹೊರತು ಪಡಿಸಿ ಸಿಎಂ ಪತ್ನಿ ನೀಡಿದ ಸೀರೆ ಉಡಿದ್ದು ಈಗ ವಿವಾದವಾಗಿದೆ. ನಗರದ ಜನರ ಒಳಿತಿಗಾಗಿ ನಾನು ಸೀರೆ ನೀಡಿದ್ದು, ಪ್ರತಿ ವರ್ಷ ಬೆಂಗಳೂರಿನ ಭಕ್ತರೊಬ್ಬರು ನೀಡುತ್ತಿದ್ದ ಸೀರೆ ಉಡಿಸಲಾಗುತ್ತಿತ್ತು. ಆದರೆ ಈ ವರ್ಷ ಸಿಎಂ ಪತ್ನಿ ಪಾರ್ವತಿ ನೀಡಿದ ಸೀರೆ‌ ಉಡಿಸಲಾಗಿದ್ದು ಏಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.