ಬೆಳಗಾವಿ (ನ.22): ನಿನ್ನೆ ನಡೆದಿದ್ದ ಸಚಿವ ರಮೇಶ್ ಜಾರಕಿಹೊಳಿ ಮಗನ  ಅದ್ದೂರಿ ಮದುವೆ ಹಿನ್ನೆಲೆಯಲ್ಲಿ ಗೈರಾಗಿದ್ದ ಸಿಎಂ ಇಂದು ಸಚಿವರ ಮನೆಗೆ ಭೇಟಿ ನೀಡಿ  ನವ ದಂಪತಿಗೆ ಹಾರೈಸಿದರು.

ಬೆಳಗಾವಿಯಿಂದ ಹೆಲಿಕಾಪ್ಟರ್ ಮುಖಾಂತರ  ಗೋಕಾಕ ನಗರಕ್ಕೆ  ಆಗಮಿಸಿದ  ಸಿದ್ದರಾಮಾಯ್ಯ ಜೊತೆ ಸಚಿವ ಪರಮೇಶ್ವರ, ಕೆ.ಜೆ ಜಾರ್ಜ್​ , ರೇವಣ್ಣ  ಮುಖ್ಯ ಸಚೇತಕ ಅಶೋಕ್ ಪಟ್ಟಣ ಶೆಟ್ಟಿ  ಸಾಥ್​ ನೀಡಿದರು. 

ಸಚಿವ ರಮೇಶ್  ಜಾರಕಿಹೋಳಿ ಮಗ ಸಂತೋಷ ಮತ್ತು ಸೊಸೆ ಅಂಬಿಕಾಗೆ  ಸಿಎಂ ಶುಭಾಶಯ ಕೋರಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ, ನಿನ್ನೆ ಬರಗಾಲ ವಿಷಯ ಚರ್ಚೆ ಇತ್ತು ಅದಕ್ಕೆ ಭಾಗವಹಿಸಲು ಆಗಿಲ್ಲಾ ಆದ್ದರಿಂದ ಇವತ್ತು ಆಗಮಿಸಿದ್ದೆನೆ ಎಂದು ತಿಳಿಸಿದರು.  ಆದರೆ ಸಿಎಂ ಹೆಲಿಕಾಪ್ಟರ್​ನಲ್ಲಿ ಮದುವೆಗೆ ಹೋಗಿದ್ದು ತೀವ್ರ ಚರ್ಚೆಗೆ ಗ್ರಾಸವಾಯ್ತು