ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್'ಎಂ.ಕೃಷ್ಣ ಬಿಜೆಪಿ ಸೇರ್ಪಡೆ ಹಾಗೂ ---
ನವದೆಹಲಿ(ಏ.15): ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯದ ಮಾಜಿ ಗುರು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರಿಗೆ ಹತ್ತಿರವಾಗತೊಡಗಿದ್ದಾರೆ.
ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್'ಎಂ.ಕೃಷ್ಣ ಬಿಜೆಪಿ ಸೇರ್ಪಡೆ ಹಾಗೂ ಬೆಂಗಳೂರು ಐಟಿ ಸಿಟಿಯ ಆರಂಭದ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ 'ನಗರದಲ್ಲಿ ಐಟಿ ಹಬ್ ಆರಂಭವಾಗಿದ್ದು ಎಸ್'ಎಂ.ಕೃಷ್ಣರ ಕಾಲದಲ್ಲಿ ಅಲ್ಲ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ. ಆದರೆ ಜನರಲ್ಲಿ ತಪ್ಪು ಕಲ್ಪನೆ ಇದೆ. ಎಲಿವೇಟೆಡ್ ರಸ್ತೆ ಕೂಡ ಗೌಡರ ಕಾಲದಲ್ಲೆ ಆರಂಭವಾಗಿದ್ದು. ಎಂದು ತಮ್ಮ ಮಾಜಿ ಗುರುವಿನ ಸಾಧನೆಯನ್ನು ನನಪಿಸಿಕೊಂಡು ಕೃಷ್ಣರನ್ನು ಪರೋಕ್ಷವಾಗಿ ಟೀಕಿಸಿದರು.
