ಅವರು 20 ಕೇಸ್ ಎದುರಿಸುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ?

ಬೆಂಗಳೂರು(ಫೆ.20): ನಾನು ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕುವುದಾಗಿ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಸಿದ್ದರಾಮಯ್ಯ ತಮ್ಮದೆ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

''ಯಡಿಯೂರಪ್ಪ ಅಧಿಕಾರಕ್ಕೆ ಬಂದ್ರೆ ತಾನೆ? ಈ ದೇಶದಲ್ಲಿ ಯಡಿಯೂರಪ್ಪನೇ ಮಹಾನ್ ಭ್ರಷ್ಟ,ಬಹುಶ: ಭಾರತ ದೇಶದಲ್ಲಿ ಯಾರಾದ್ರೂ ಅತೀ ದೊಡ್ಡ ಭ್ರಷ್ಟ ಇದ್ರೆ ಇದು ಮಿಸ್ಟರ್ ಯಡಿಯೂರಪ್ಪ. ಹಾಗಾಗಿಯೇ ಅವರು 20 ಕೇಸ್ ಎದುರಿಸುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ? ಎಂದು ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.