ವಿಧಾನಸಭಾ ಚುನಾವಣೆ ಘೋಷಣೆ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಸಿಎಂ ಅಧಿಕೃತ ಖಾತೆಗಳು ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಪುನಾರಂಭ
ಬೆಂಗಳೂರು: ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮುಖ್ಯಮಂತ್ರಿಯವರ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳು ಇದೀಗ ಕಾರ್ಯಾರಂಭಿಸಿವೆ.
ವಿಧಾನಸಭಾ ಚುನಾವಣೆಗಳಿಗೆ ದಿನಾಂಕಗಳು ಘೋಷಣೆಯಾಗುವ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಗಳು ಸ್ಥಗಿತಗೊಂಡಿದ್ದವು.
ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧಗೊಳ್ಳುತ್ತಿದ್ದಂತೆಯೇ ಫೇಸ್‌ಬುಕ್ ಮತ್ತು ಟ್ವೀಟರ್ ಖಾತೆಗಳಲ್ಲಿ ಅಪ್‌ಡೇಟ್‌ಗಳು ಸದ್ದು ಮಾಡತೊಡಗಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು ಅಲ್ಲದೇ, ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಗಳ ಮೂಲಕ ಅವರ ಹೇಳಿಕೆ/ಪ್ರಕಟಣೆ/ಕಾರ್ಯಕ್ರಮಗಳನ್ನು ಹಂಚಿಕೊಳ್ಳುವ ಮೂಲಕ ಜನಸಂಪರ್ಕದಲ್ಲಿದ್ದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಫೇಸ್‌ಬುಕ್‌ನಲ್ಲಿ ಇಲ್ಲಿ ಫಾಲೋ ಮಾಡಬಹುದು.
https://www.facebook.com/CMofKarnataka/
ಟ್ವಿಟರ್‌ನಲ್ಲಿ ಮುಖ್ಯಮಂತ್ರಿಗಳನ್ನು ಇಲ್ಲಿ ಫಾಲೋ ಮಾಡಬಹುದು.
https://twitter.com/CMofKarnataka
ಎಚ್‌ಡಿಕೆ ಈಗಾಗಲೇ ವೈಯುಕ್ತಿಕ ಟ್ವಿಟರ್ ಖಾತೆಗಳು ಹೊಂದಿದ್ದಾರೆ.
ಉಪ-ಮುಖ್ಯಮಂತ್ರಿ ಡಾ. ಪರಮೇಶ್ವರ್:
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರನ್ನು ಈ ಅಧಿಕೃತ ಖಾತೆಗಳನ್ನು ಫಾಲೋ ಮಾಡಬಹುದು
ಫೇಸ್‌ಬುಕ್: https://www.facebook.com/DrGParameshwara/
ಟ್ವಿಟರ್: https://twitter.com/DrParameshwara
