ತನ್ವೀರ್ ಸೇಠ್‍ರಿಂದ ರಾಜೀನಾಮೆ ಪಡೆಯಲ್ಲ. ಉದ್ದೇಶಪೂರ್ವವಾಗಿ ಅವರು ಆಶ್ಲೀಲ ದೃಶ್ಯಗಳನ್ನು ನೋಡಿಲ್ಲವೆಂದು ಮತ್ತೊಮ್ಮೆ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು(ನ.20): ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್‍ರಿಂದ ರಾಜೀನಾಮೆ ಪಡೆಯಲ್ಲ. ಉದ್ದೇಶಪೂರ್ವವಾಗಿ ಅವರು ಆಶ್ಲೀಲ ದೃಶ್ಯಗಳನ್ನು ನೋಡಿಲ್ಲವೆಂದು ಮತ್ತೊಮ್ಮೆ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಈಗಾಗಲೇ ಕ್ರೈಂ ಬ್ರಾಂಚ್ ತನಿಖೆ ನಡೆಸಿದೆ. ಅದರ ವರದಿ ನನಗೆ ತಲುಪಿಲ್ಲ. 

ಬಿಜೆಪಿಯವರು ಉದ್ದೇಶವಾಗಿಯೇ ಅಶ್ಲೀಲ ವಿಡಿಯೋಗಳನ್ನು ನೋಡಿದ್ದಾರೆ. ಆದರೆ ತನ್ವೀರ್ ಸೇಠ್ ಮೊಬೈಲ್ ನೋಡುವಾಗ ಆಕಸ್ಮಿಕವಾಗಿ ನೋಡಿದ್ದಾರೆ. ಹೀಗಾಗಿ ಅವರ ರಾಜೀನಾಮೆ ಪಡೆಯುವುದಿಲ್ಲವೆಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬರುವ ದುರಾಲೋಚನೆಯಿಂದ ರೈತರಿಗೆ ಆಮಿಷವೊಡ್ಡುತ್ತಿದ್ದಾರೆ. ಅವರ ಬಂಡವಾಳ ರಾಜ್ಯದ ಜನತೆಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.