ಸಿಎಂ ಸಿದ್ಧರಾಮಯ್ಯ ಸುಮಾರು  5 ಗಂಟೆಗಳ ಕಾಲ ಖಾಸಗಿ ಚಾನೆಲ್​ ನ ಕಾರ್ಯಕ್ರಮವೊಂದರಲ್ಲಿ  ಇಂದು ಭಾಗಿಯಾಗಿದ್ದರು. ತಮ್ಮ ಒತ್ತಡದ ಕೆಲಸದ ನಡುವೆಯೂ ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ ಖಾಸಗಿ ಚಾನೆಲ್​ಗೆ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್'  ಕಾರ್ಯಕ್ರಮದಲ್ಲಿ ತಮ್ಮ ಇಡೀ ಜೀವನವನ್ನು ಇಂದು ಮೆಲುಕು ಹಾಕಿದರು.

ಬೆಂಗಳೂರು (ಜೂ.22): ಸಿಎಂ ಸಿದ್ಧರಾಮಯ್ಯ ಸುಮಾರು 5 ಗಂಟೆಗಳ ಕಾಲ ಖಾಸಗಿ ಚಾನೆಲ್​ ನ ಕಾರ್ಯಕ್ರಮವೊಂದರಲ್ಲಿ ಇಂದು ಭಾಗಿಯಾಗಿದ್ದರು. ತಮ್ಮ ಒತ್ತಡದ ಕೆಲಸದ ನಡುವೆಯೂ ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ ಖಾಸಗಿ ಚಾನೆಲ್​ಗೆ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ತಮ್ಮ ಇಡೀ ಜೀವನವನ್ನು ಇಂದು ಮೆಲುಕು ಹಾಕಿದರು.

Add Asianetnews Kannada as a Preferred SourcegooglePreferred

ಸಿಎಂ ಆಗಮನದ ಹಿನ್ನಲೆಯಲ್ಲಿ ಉತ್ತರಹಳ್ಳಿಯ ಅಬ್ಬಯ್ಯ ನಾಯ್ಡು ಸ್ಟುಡಿಯೋಗೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಸಿಎಂ ಸಿದ್ಧರಾಮಯ್ಯನವರ ಆಗಮನದ ಸುಮಾರು ಎರಡು-ಮೂರು ಗಂಟೆ ಮೊದಲೇ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಎಂ ಆಗಮಿಸಿದರು. ಸ್ಟಾರ್’ಗಳಿಗೆಂದೇ ಮೀಸಲಿರಿಸಿರುವ ಏಸಿ ಕ್ಯಾರವಾನ್ ಒಳಗೆ ಹೋದರು. ಅಲ್ಲಿ ಮೇಕಪ್ ಅಂತೆಲ್ಲಾ ತಲೆ ಕೆಡಸಿಕೊಳ್ಳದೇ ನೇರವಾಗಿ ಸ್ಟುಡಿಯೋಗೆ ತೆರಳಿದರು. ಕಾರ್ಯಕ್ರಮ ಮುಗಿಸಿ ಹೊರ ಬಂದ ಬಳಿಕ ಎಲ್ಲೂ ಕಾರ್ಯಕ್ರಮದ ಗುಟ್ಟು ಬಿಟ್ಟುಕೊಡಲಿಲ್ಲ. ಲಂಚ್ ಟೈಮ್​ ನಲ್ಲಿ ಮಾತನಾಡುವಾಗ ಶನಿವಾರ ಕಾರ್ಯಕ್ರಮ ಪ್ರಸಾರ ಆಗುತ್ತೆ. ಆಗ ನೀವೇ ನೋಡಿ. ಹೇಗಿದೆ ಅಂತ ನೀವೇ ತಿಳಿಸಿ ಎಂದು ಹೇಳಿ ಹೊರಟು ಹೋದರು.
ಈ ಕಾರ್ಯಕ್ರಮಕ್ಕೆ ಸಿದ್ಧರಾಮಯ್ಯ ಕುಟುಂಬದ ಸದಸ್ಯರು, ಪುತ್ರ ಯತೀಂದ್ರ, ರಾಜಕೀಯ ಆತ್ಮೀಯ ಸ್ನೇಹಿತರೂ ಆಗಮಿಸಿದ್ದರು. ಕೆ.ಜೆ.ಜಾರ್ಜ್ ಸೇರಿದಂತೆ ಎಚ್.ಎಂ.ರೇವಣ್ಣ ವಿಶೇಷ ಅತಿಥಿ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಾಧಕರ ಸ್ಪೂರ್ತಿದಾಯಕ ಬದುಕನ್ನ ತೆರೆದಿಡೋ ರಮೇಶ್ ಅರವಿಂದ್ ಅವರ ಈ ಕಾರ್ಯಕ್ರಮದಲ್ಲಿ ಈ ಹಿಂದೆ ಮಾಜಿ ಪ್ರಧಾನಿ ದೇವೆಗೌಡರು ಬಂದು ಹೋಗಿದ್ದಾರೆ. ಈಗ ರಾಜ್ಯದ ಸಿ.ಎಂ. ಸಿದ್ದರಾಮಯ್ಯನವರು ಮನದಾಳದ ಮಾತು ಮತ್ತು ತಮ್ಮ ಬದುಕಿನ ಹಾದಿಯನ್ನ ಬಿಚ್ಚಿಟ್ಟಿದ್ದಾರೆ.ಇದೇ ಶನಿವಾರ ಮತ್ತು ಭಾನುವಾರ ಸಿಎಂ ಸಿದ್ದರಾಮಯ್ಯನವರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಪ್ರಸಾರ ಆಗಲಿದೆ.