ರಾಜೇಂದ್ರ ಕಟಾರಿಯಾಗೆ ಶಾಸಕ ಶಿವಮೂರ್ತಿ ನಾಯಕ್ ಧಮ್ಕಿ ಹಾಕಿರುವ ವಿಚಾರವಾಗಿ ಮಾಯಕೊಂಡ ಶಾಸಕರಿಗೆ ಸಿಎಂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರು (ಅ.11): ರಾಜೇಂದ್ರ ಕಟಾರಿಯಾಗೆ ಶಾಸಕ ಶಿವಮೂರ್ತಿ ನಾಯಕ್ ಧಮ್ಕಿ ಹಾಕಿರುವ ವಿಚಾರವಾಗಿ ಮಾಯಕೊಂಡ ಶಾಸಕರಿಗೆ ಸಿಎಂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ಜೊತೆ ಹೇಗಿರಬೇಕು ಅನ್ನೋದು ಗೊತ್ತಿಲ್ವಾ? ಇಂಥ ನಾನ್ ಸೆನ್ಸ್ ಕೆಲಸ ಎಲ್ಲ ಮಾಡಬೇಡ. ಅಧಿಕಾರಿಗಳಿಗೆ ಬೈಯೋದು ಅಂದ್ರೆ ಏನು ಅಂದುಕೊಂಡಿದ್ದೀಯಾ? ಹೆಚ್ಚು ಕಡಿಮೆ ಆದರೆ ನಿನ್ನನ್ನು ಜೈಲಿಗೆ ಕಳಿಸ್ತಾರೆ ಹುಷಾರ್ . ಎಲೆಕ್ಷನ್ ಟೈಮ್ ನಲ್ಲಿ ಇಂತಹದ್ದೆಲ್ಲಾ ಮಾಡ್ಕೊಂಡ್ರೆ ಬಿ-ಫಾರಂ ಸಿಗಲ್ಲ ತಿಳ್ಕೋ ಎಂದು ರೇಗಿದ್ರು. ಇದಕ್ಕೆ ಶಿವಮೂರ್ತಿ ಹಾಗಲ್ಲ ಸಾರ್ ಅಂತ ಸಮಜಾಯಿಷಿ ನೀಡಲು ಮುಂದಾದರೂ ಸಿಎಂ ಕೇಳಿಸಿಕೊಳ್ಳಲಿಲ್ಲ. ಇನ್ನು ಸಿಎಂ ಕೋಪ ತಣ್ಣಗಾಗದ್ದನ್ನು ನೋಡಿ ಸಿಎಂ ನಿವಾಸದಿಂದ ಶಿವಮೂರ್ತಿ ನಾಯಕ್ ಜಾಗ ಖಾಲಿ ಮಾಡಿದರು.
ರಾಜ್ಯದಲ್ಲಿ ಎಸ್ಸಿ ಎಸ್ಟಿ ವರ್ಗದ ಜನಾಂಗಕ್ಕೆ ಗಣಿ ವಿಚಾರದಲ್ಲಿ ಭಾರಿ ಅನ್ಯಾಯವಾಗಿದೆ ಎಂದು ಐಎಎಸ್ ಅಧಿಕಾರಿಗೆ ಶಿವಮೂರ್ತಿ ನಾಯ್ಕ್ ಧಮ್ಕಿ ಹಾಕಿದ್ದಾರೆ. ರಾಜ್ಯದಲ್ಲಿ ಎಸ್ಸಿ ಎಸ್ಟಿ ವರ್ಗದ ಜನಾಂಗಕ್ಕೆ ಗಣಿ ವಿಚಾರದಲ್ಲಿ ಭಾರಿ ಅನ್ಯಾಯವಾಗಿದೆ ಅವರ ಬಗ್ಗೆ ನ್ಯಾಯ ಕೇಳಿದ್ದು ತಪ್ಪಾ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
