ಮಠಗಳ ನಿಯಂತ್ರಣಕ್ಕೆ 'ಕೈ' ಹಾಕುತ್ತಿದ್ದಾರಾ ಸಿಎಂ ಸಿದ್ದರಾಮಯ್ಯ?

First Published 7, Feb 2018, 11:06 AM IST
CM Siddharamaiah Restricts Mutts
Highlights

ರಾಜ್ಯದ ಮಠಗಳು, ಧಾರ್ಮಿಕ ಸಂಸ್ಥೆಗಳ ಮೇಲೆ ಸಿಎಂ ಸಿದ್ದರಾಮಯ್ಯ ಕಣ್ಣಿಟ್ಟಿದ್ದಾರೆ.  ಮಠಗಳನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿಸಲು ನಡೆದಿದೆ ಬಹುದೊಡ್ಡ ಪ್ಲ್ಯಾನ್ ನಡೆದಿದೆ.

ಬೆಂಗಳೂರು (ಫೆ.07): ರಾಜ್ಯದ ಮಠಗಳು, ಧಾರ್ಮಿಕ ಸಂಸ್ಥೆಗಳ ಮೇಲೆ ಸಿಎಂ ಸಿದ್ದರಾಮಯ್ಯ ಕಣ್ಣಿಟ್ಟಿದ್ದಾರೆ.  ಮಠಗಳನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿಸಲು ನಡೆದಿದೆ ಬಹುದೊಡ್ಡ ಪ್ಲ್ಯಾನ್ ನಡೆದಿದೆ.

ಚುನಾವಣೆಗೆ ಕೇವಲ 3 ತಿಂಗಳ ಅವಧಿ ಇರುವಾಗಲೇ ಸಿಎಂ ಮಠಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಠಗಳು, ದೇಗುಲ, ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ವ್ಯಾಪ್ತಿಗೆ ಕಾಯ್ದೆ ತರಲು ಸರ್ಕಾರ  ನಿರ್ಧರಿಸಿದೆ.

ಧಾರ್ಮಿಕ ದತ್ತಿ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ಹೊಪರ ಬಿದ್ದಿದೆ.   ಸಾರ್ವಜನಿಕ ಅಭಿಪ್ರಾಯ, ಆಕ್ಷೇಪಣೆಗೆ ಧಾರ್ಮಿಕ ದತ್ತಿ ಇಲಾಖೆ ಅರ್ಜಿ ಆಹ್ವಾನಿಸಿದೆ. ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಕಾಯ್ದೆಗೆ ಒಳಪಡಿಸಬೇಕೆ?

ಒಳಪಡಿಸಬೇಕಿದ್ರೆ ಏಕೆ..? ಎಷ್ಟರಮಟ್ಟಿಗೆ ಒಳಪಡಿಸಬೇಕು ? ಎಂದು ಅಭಿಪ್ರಾಯ ಕೇಳಿ  15 ದಿನದೊಳಗಾಗಿ ಸಾರ್ವಜನಿಕ ಅಭಿಪ್ರಾಯ, ಸಲಹೆ ನೀಡುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

 

loader