ಬಿಜೆಪಿ ನಾಯಕರ ಕ್ಷೇತ್ರ ಬದಲಾಬಣೆ ಬಗ್ಗೆ ಮಾತನಾಡುತ್ತ ,ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು ? ಎಂದು ಬಿಎಸ್​ವೈ ಉತ್ತರ ಕರ್ನಾಟದಿಂದ ಸ್ಪರ್ದೆ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಕಲಬುರ್ಗಿ (ಸೆ.19): ಬಿಜೆಪಿ ನಾಯಕರ ಕ್ಷೇತ್ರ ಬದಲಾಬಣೆ ಬಗ್ಗೆ ಮಾತನಾಡುತ್ತ ,ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು ? ಎಂದು ಬಿಎಸ್​ವೈ ಉತ್ತರ ಕರ್ನಾಟದಿಂದ ಸ್ಪರ್ದೆ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಯಡಿಯೂರಪ್ಪ ಎಲ್ಲಿ ನಿಂತುಕೊಂಡ್ರೆ ನಮಗೇನು ? ಅವರಿಗೆ ವಿಧಾನ ಸಭಾ ಕ್ಷೇತ್ರವಿಲ್ಲ. ಶಿಕಾರಿಪುರ ಕ್ಷೇತ್ರವನ್ನು ತಮ್ಮ ಮಗನಿಗೆ ಕೊಡುವ ಉದ್ದೇಶದಿಂದ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ದೆ ಮಾಡಿದರೆ ಬಿಜೆಪಿಗೆ ಲಾಭವಿಲ್ಲ ಎಂದು ಸಿಎಂ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ವಿಚಾರದಲ್ಲಿ ಬೆಂಕಿ ಹಚ್ಚಿದ್ದೆ ಸಿಎಂ ಎಂಬ ಈಶ್ವರಪ್ಪ ಹೇಳಿಕೆಗೆ ಗರಂ ಆದ ಸಿಎಂ ಈಶ್ವರಪ್ಪ ತಲೆಯಲ್ಲಿ ಮೆದುಳಿಲ್ಲ ಮನಸ್ಸಿಗೆ ಬಂದಂತೆ ಮಾತಾಡ್ತಾನೆ ಎಂದು ಈಶ್ವರಪ್ಪ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ನಿನ್ನೆ ಆರ್ ಅಶೋಕ್ ಮಾಡಿದ ಆರೋಪಕ್ಕೆ ಪ್ರತಿಕ್ರಯಿಸುತ್ತಾ ಫೋನ್ ಕದ್ದಾಲಿಕೆ ಮಾಡ್ತಿರೋರೆ ಬಿಜೆಪಿಯವರು. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಐಟಿ, ಇಡಿ, ಸಿಬಿಐಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಖಮರುಲ್ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಿಎಂ ಹೆಲಿಪ್ಯಾಡ್'ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.