ಸಿದ್ದರಾಮಯ್ಯ ಸರ್ಕಾರ ಬಿಎಸ್ ವೈ ಮತ್ತು ಅನಂತಕುಮಾರ್ ವಿರುದ್ಧ ಎಸಿಬಿ ಮೂಲಕ ಎಫ್ಐಆರ್ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ವೇಳೆ, ರಾಜ್ಯ ಸರ್ಕಾರದ ನಡೆಗೆ ನಾವು ಬಗ್ಗಲ್ಲ,ಜಗ್ಗಲ್ಲ. ವಿಧಾನ ಮಂಡಲದಲ್ಲಿ, ನ್ಯಾಯಾಲಯದಲ್ಲಿ ತಕ್ಕ ಉತ್ತರ ನೀಡುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ.
ಬೆಂಗಳೂರು (ಅ. 09): ಸಿದ್ದರಾಮಯ್ಯ ಸರ್ಕಾರ ಬಿಎಸ್ ವೈ ಮತ್ತು ಅನಂತಕುಮಾರ್ ವಿರುದ್ಧ ಎಸಿಬಿ ಮೂಲಕ ಎಫ್ಐಆರ್ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ವೇಳೆ, ರಾಜ್ಯ ಸರ್ಕಾರದ ನಡೆಗೆ ನಾವು ಬಗ್ಗಲ್ಲ,ಜಗ್ಗಲ್ಲ. ವಿಧಾನ ಮಂಡಲದಲ್ಲಿ, ನ್ಯಾಯಾಲಯದಲ್ಲಿ ತಕ್ಕ ಉತ್ತರ ನೀಡುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ವಿಡಿಯೋವೊಂದನ್ನ ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಬಿಜೆಪಿಯ ಉಭಯ ನಾಯಕರು ತಾವು ಹೈಕಮಾಂಡ್ಗೆ ಕಪ್ಪ ನೀಡಿದ್ದೇವೆ ಅನ್ನೋದನ್ನ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಇದನ್ನ ಬಿಜೆಪಿ ಅಲ್ಲಗಳೆಯುತ್ತಲೇ ಬಂದಿತ್ತು.ಕೊನೆಗೆ ವಿಡಿಯೋ ವಿಧಿ ವಿಜ್ಞಾನ ಇಲಾಖೆಯ ಪರೀಕ್ಷೆಗೆ ಒಳಪಟ್ಟಿತ್ತು. ಇದೀಗ ವಿಧಿವಿಜ್ಞಾನ ವರದಿ ನೀಡಿದ್ದು, ಅದು ಬಿಎಸ್ವೈ ಮತ್ತು ಅನಂತಕುಮಾರ್ ಅವರದ್ದೇ ಧ್ವನಿ ಅಂತಾ ಹೇಳಿದೆ. ಈ ವರದಿ ಬಂದ ತಕ್ಷಣವೇ ರಾಜ್ಯದಲ್ಲಿ ಹೊಸ ಪೊಲಿಟಿಕಲ್ ಗೇಮ ಶುರುವಾಗಿದೆ.
ಸಿದ್ದರಾಮಯ್ಯ ಹತಾಶೆಯಿಂದ ಮಾತನಾಡುತ್ತಿದ್ದಾರೆ. ನಮ್ಮನ್ನ ಹೆದರಿಸುವ ಅವರ ತಂತ್ರ ಫಲಿಸಲ್ಲ. ಅವರು ಹಾಕೋ ಬೆದರಿಕೆಗೆ ಬಗ್ಗಲ್ಲ ಅಂತಾ ಕೇಂದ್ರ ಸಚಿವ ಅನಂತಕುಮಾರ್ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಅವರ ಬೆದರಿಕೆಗೆ ವಿದಾನಮಂಡಲ ಹಾಗೂ ಕೋರ್ಟ್ನಲ್ಲೇ ಉತ್ತರ ನೀಡುತ್ತೇವೆ ಅಂತಾ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕಾಂಗ್ರೆಸ್ ತನ್ನ ನಿಲುವಿಗೆ ಅಂಟಿಕೊಂಡಿದ್ದರೆ, ಬಿಜೆಪಿ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ. ಹೈಕಮಾಂಡ್ಗೆ ಕಪ್ಪ ನೀಡೋ ಸಂಸ್ಕೃತಿ ಕಾಂಗ್ರೆಸ್ನಲ್ಲಿಲ್ಲ. ಬದಲಾಗಿ ಬಿಜೆಪಿಯಲ್ಲಿದೆ. ಅದೂ ಬಿಎಸ್ವೈ ಮತ್ತು ಅನಂತಕುಮಾರ್ ಅವರೇ ಹೇಳಿದ್ದಾರೆ ಎನ್ನುತ್ತೆ ಕಾಂಗ್ರೆಸ್.. ಇನ್ನೂ ನಾವು ಹೈಕಮಾಂಡ್ಗೆ ಕಪ್ಪ ನೀಡಿದ್ದೇವೆ ಅಂತಾ ಹೇಳಿಲ್ಲ. ಸಿದ್ದರಾಮಯ್ಯ ಸಿಕ್ಕಾಗ ಹೈಕಮಾಂಡ್ಗೆ ಕಪ್ಪ ನೀಡಿದ್ದೇವೆ. ಸಾವಿರ ಕೋಟಿ ನೀಡಿದ್ದೇವೆ ಅಂತಾ ಹೇಳೋಕ್ಕೆ ಸಾಧ್ಯವಾ ಅಂತಾ ಹೇಳಿದ್ದರು. ಅದನ್ನೇ ಬಿಎಸ್ವೈ ಮುಂದೆ ಅನಂತಕುಮಾರ್ ಹೇಳಿದ್ದಾರೆ. ಇದನ್ನೇ ಮಅಧ್ಯಮಗಳು ತಿರುಚಿ ಪ್ರಸಾರ ಮಾಡಿವೆ ಅನ್ನೋ ಬಿಜೆಪಿ ನಿಲುವು. ವಿಚಾರ ಹೀಗೆ ಇದ್ದಾಗ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಸಾಧ್ಯವೆ ಅನ್ನೋ ಎದ್ದಿದೆ.
