ಪ್ರಧಾನಿ ನರೇಂದ್ರ ಮೋದಿಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಮೆಂಟ್ ಮಾಡುವ ಸಿಎಂ ಸಿದ್ದರಾಮಯ್ಯ, ಮನ್ ಕಿ ಬಾತ್ ಒಂದು ಕಾರ್ಯಕ್ರಮನಾ? ಮೋದಿ ಏನೂ ಮಾಡದೆ ಮಾತನಾಡುತ್ತಿದ್ದಾರೆ. ನಾವು ಕೆಲಸ ಮಾಡಿ ತೋರಿಸುತ್ತಿದ್ದೇವೆ . ಅದಕ್ಕೆ ಕಾಮ್ ಕಿ ಬಾತ್ ಎನ್ನುತ್ತಿದ್ದೇವೆ ಎಂದು ಮನ್ ಕೀ ಬಾತ್ಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಅ.02): ಪ್ರಧಾನಿ ನರೇಂದ್ರ ಮೋದಿಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಮೆಂಟ್ ಮಾಡುವ ಸಿಎಂ ಸಿದ್ದರಾಮಯ್ಯ, ಮನ್ ಕಿ ಬಾತ್ ಒಂದು ಕಾರ್ಯಕ್ರಮನಾ? ಮೋದಿ ಏನೂ ಮಾಡದೆ ಮಾತನಾಡುತ್ತಿದ್ದಾರೆ. ನಾವು ಕೆಲಸ ಮಾಡಿ ತೋರಿಸುತ್ತಿದ್ದೇವೆ . ಅದಕ್ಕೆ ಕಾಮ್ ಕಿ ಬಾತ್ ಎನ್ನುತ್ತಿದ್ದೇವೆ ಎಂದು ಮನ್ ಕೀ ಬಾತ್ಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಮೋದಿಯವರ ಮನ್ ಕಿ ಬಾತ್ ಗೆ ಪ್ರತಿಯಾಗಿ ಪ್ರಾಸ ಬರುವಂತೆ ಕಾಮ್ ಕಿ ಬಾತ್ ಎಂದು ಹೇಳಿದ್ದೇನೆ. ಅನ್ಯ ಭಾಷೆಯ ಶಬ್ದಗಳಿಗೆ ಉ ಕಾರ ಸೇರಿಸಿದರೆ ಅದು ಕನ್ನಡ ಶಬ್ದವೇ ಆಗುತ್ತದೆ. ಬಸ್'ಗೆ ಬಸ್ಸು, ಕಾರ್'ಗೆ ಕಾರು ಎಂದು ಹೇಳೋದಿಲ್ವಾ ಹಾಗೆ ಕಾಮ್ ಕಿ ಬಾತ್ ಅನ್ನೋದು ಕನ್ನಡ ಶಬ್ದವೇ ಎಂದು ಅರ್ಥೈಸಿಕೊಳ್ಳಬೇಕು ಎಂದು ಮತ್ತೆ ಕನ್ನಡದ ಪಾಠ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.
