ಪರಮೇಶ್ವರ್ ಅಸಮಾಧಾನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲಗೆ ಕರೆ ಮಾಡಿ ಪರಮೇಶ್ವರ್ ವಿರುದ್ಧ ದೂರು ನೀಡಿದ್ದಾರೆ.

ಬೆಂಗಳೂರು (ಸೆ.03): ಪರಮೇಶ್ವರ್ ಅಸಮಾಧಾನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲಗೆ ಕರೆ ಮಾಡಿ ಪರಮೇಶ್ವರ್ ವಿರುದ್ಧ ದೂರು ನೀಡಿದ್ದಾರೆ.

ಕಳೆದೆರಡು ದಿನಗಳಿಂದ ಪರಮೇಶ್ವರ್ ವರ್ತನೆಯಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗುರವಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯಿಂದ ಸರ್ಕಾರ ಪೇಚಿಗೆ ಸಿಲುಕಿಕೊಂಡಿದೆ. ಈ ಬಗ್ಗೆ ಗೊತ್ತಿದ್ದರೂ ಮಾಧ್ಯಮಗಳಿಗೆ ಪರಮೇಶ್ವರ್ ಪ್ರತಿಕ್ರಿಯೆ ನೀಡುತ್ತಿಲ್ಲ. ಕೂಡಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ತಕ್ಷಣವೇ ಪರಮೇಶ್ವರ್'ಗೆ ಕರೆ ಮಾಡಿ ವೇಣುಗೋಪಾಲ್ ತರಾಟೆಗೆ ತಗೆದುಕೊಂಡಿದ್ದಾರೆ. ಕೂಡಲೇ ಸುದ್ದಿಗೋಷ್ಠಿ ಮಾಡಿ ಪ್ರತಿಕ್ರಿಯೆ ನೀಡಲು ವೇಣುಗೋಪಾಲ ಪರಮೇಶ್ವರ್ ಗೆ ತಾಕೀತು ಮಾಡಿದ್ದಾರೆ.

ಪರಿಣಾಮ ತುಮಕೂರಿಗೆ ಪ್ರತ್ಯೇಕ ಕಾರಿನಲ್ಲಿ ತೆರಳಬೇಕಿದ್ದ ಪರಮೇಶ್ವರ್ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿ ಕೆಪಿಸಿಸಿಗೆ ಬಂದು ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದರು. ಒಟ್ಟಿನಲ್ಲಿ ಸಿದ್ದರಾಮಯ್ಯ, ಪರಮೇಶ್ವರ ನಡುವಿನ ಮುನಿಸು ತಾರಕಕ್ಕೇರಿದಂತಾಗಿದೆ.