ತಾಕತ್ತಿದ್ದರೆ ದಲಿತ ನಾಯಕನನ್ನು ಸಿಎಂ ಮಾಡುವಂತೆ ದೇವೇಗೌಡರಿಗೆ ಸಿಎಂ ಸವಾಲು ಹಾಕಿದ್ದಾರೆ. ಕೊಪ್ಪಳದಲ್ಲಿ ಎಚ್'ಡಿಕೆ , ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ (ಡಿ.14): ತಾಕತ್ತಿದ್ದರೆ ದಲಿತ ನಾಯಕನನ್ನು ಸಿಎಂ ಮಾಡುವಂತೆ ದೇವೇಗೌಡರಿಗೆ ಸಿಎಂ ಸವಾಲು ಹಾಕಿದ್ದಾರೆ. ಕೊಪ್ಪಳದಲ್ಲಿ ಎಚ್'ಡಿಕೆ , ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮಾವೇಶ ಮಾಡಿದೆ. ದೇವೇಗೌಡರ ಜತೆ ಕೆಲಸ ಮಾಡಿ ನನಗೆ ಎಲ್ಲವೂ ಗೊತ್ತಿದೆ. ದಲಿತರನ್ನು ಉಪ ಮುಖ್ಯಮಂತ್ರಿ ಮಾಡುತ್ತೇನೆನ್ನುವ ಎಚ್ ಡಿಕೆ ದಲಿತರನ್ನು ಸಿಎಂ ಏಕೆ ಮಾಡಬಾರದು ಎಂದು ಸಿಎಂ ಸವಾಲು ಹಾಕಿದ್ದಾರೆ.

ದೇವೇ ಗೌಡರ ಶೈಲಿಯಲ್ಲಿ ಸಿದ್ದರಾಮಯ್ಯ ಅವರನ್ನೇ ಟೀಕಿಸಿದ್ದಾರೆ. ನನ್ನ ಕೊನೆ ಆಸೆ ಮಗನನ್ನು ಸಿಎಂ ಮಾಡಬೇಕೆನ್ನುವ ಎಚ್ ಡಿ ದೇವೇಗೌಡ ದಲಿತರನ್ನು ಸಿಎಂ ಏಕೆ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ನಾನು ಮಾತ್ರ ದಲಿತರ ಪರ ಇದ್ದೇನೆ. ದಲಿತರು ಮುಖ್ಯಮಂತ್ರಿ ಆಗಬೇಕು ಎನ್ನುವುದೇ ನನ್ನ ಆಸೆ ಎಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.