ರೈತರ ಸಾಲಮನ್ನಾವನ್ನು ಮಾಡಿರುವ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಸಾಲ ಮನ್ನವಾಗಬೇಕಾದರೆ ಪ್ರಮುಖ 14 ಷರತ್ತುಗಳನ್ನು ವಿಧಿಸಿದೆ.
ಬೆಂಗಳೂರು(ಜೂ.24): ಸಹಕಾರಿ ಸಂಘಗಳಲ್ಲಿ 50 ಸಾವಿರದೊಳಗಿನ ರೈತರ ಸಾಲಮನ್ನಾವನ್ನು ಮಾಡಿರುವ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಸಾಲ ಮನ್ನವಾಗಬೇಕಾದರೆ ಪ್ರಮುಖ 14 ಷರತ್ತುಗಳನ್ನು ವಿಧಿಸಿದೆ.
ಸಾಲಮನ್ನಾದಿಂದ 16 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 8,165 ಕೋಟಿ ರು ಹೊರೆಯಾಗಲಿದೆ.
ಸಾಲ ಮನ್ನಾ ಸುತ್ತೋಲೆಯ ಪ್ರಮುಖ ಷರತ್ತುಗಳು
1) ಪಶುಭಾಗ್ಯ ಸಾಲ, ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ ಸಾಲ ಪಡೆದಿರುವವರ ಸಾಲ ಮನ್ನಾ ಇಲ್ಲ
2)50 ಸಾವಿರಕ್ಕಿಂತ ಹೆಚ್ಚು ಅಲ್ಪಾವಧಿ ಸಾಲ ಪಡೆದವರು 2018, ಜೂನ್ ಒಳಗೆ ಅಸಲು ಪಾವತಿಸಿದ್ರೇ ಮಾತ್ರ 50 ಸಾವಿರ ಸಾಲ ಮನ್ನಾ
3) ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಹೊಂದಿರುವ ರೈತರು ಡಿಸೆಂಬರ್ 31, 2017ರೊಳಗಾಗಿ ಮರುಪಾವತಿ ಮಾಡಿದ್ರೆ ಮಾತ್ರ 50 ಸಾಲ ಮನ್ನಾ, ಅಸಲು ಮತ್ತು ಬಡ್ಡಿ ಸೇರಿ ಸಾಲ ಮನ್ನಾ
4) ಸಾಲಮನ್ನಾ ದಿನಾಂಕದ ಗಡುವಿನ ಬಳಿಕವಷ್ಟೇ ಸಾಲಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಕೊಡುವುದು
5) ರೈತನೊಬ್ಬ ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ರೆ ಒಂದೇ ಬ್ಯಾಂಕಿನಲ್ಲಿ ಮಾತ್ರ ಸಾಲ ಮನ್ನಾ ಸೌಲಭ್ಯ
6) ಸಾಲ ಪಡೆದ ರೈತ ಮೃತಪಟ್ಟಿದ್ದಲ್ಲಿ ಸಂಬಂಧಪಟ್ಟ ವಾರಸುದಾರರು ಸಾಲ ಕಟ್ಟಿದ್ರೆ ಮಾತ್ರ ಸಾಲ ಮನ್ನಾ
ಮಹಾರಾಷ್ಟ್ರ ಸರ್ಕಾರದಿಂದಲೂ ಸಾಲ ಮನ್ನಾ
ಮಹಾರಾಷ್ಟ್ರ ಸರ್ಕಾರ ಕೂಡ ರೈತರ 1.5 ಲಕ್ಷ ರೂ.ವರೆಗಿನ ರೈತರ ಸಾಲಮನ್ನಗೊಳಿಸಿ ಆದೇಶಿಸಿದೆ. ಈ ಸಾಲಮನ್ನಾದಿಂದ ಆ ರಾಜ್ಯದ 19 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 34 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ತಿಳಿಸಿದ್ದಾರೆ.
