Asianet Suvarna News Asianet Suvarna News

ಲಿಂಗಾಯಿತ ಪ್ರತ್ಯೇಕ ಧರ್ಮ; ಕುತೂಹಲ ಮೂಡಿಸಿದೆ ಸಿಎಂ ನಿರ್ಧಾರ

ಚುನಾವಣೆ ಹೋಸ್ತಿಲ್ಲಿರುವ ರಾಜ್ಯ ಕರ್ನಾಟಕ. ಆದ್ರಿಗ ಚುನಾವಣೆ ಕಾವು ಏರುತ್ತಿದಂತೆ, ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗಾಗಿ ಪರ - ವಿರೋಧದ ಕಾವು ಅಷ್ಟೇ ಜೋರಾಗಿದೆ. ಈ ಮಧ್ಯೆ ಲಿಂಗಾಯತ ಪ್ರತ್ಯೇಕತೆಗಾಗಿ ತೋಂಟದಾರ್ಯ ಸ್ವಾಮೀಜಿ ಮತ್ತು ಚಿತ್ರದುರ್ಗ ಮುರಗ ಶ್ರೀಗಳ ನೇತೃತ್ವದ 300 ಕ್ಕೂ ಹೆಚ್ಚು ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮ ರಚನೆ ಆಗಲೇಬೇಕೆಂದು ಒತ್ತಡ ಹೇರಿದ್ದಾರೆ. 

CM Siddaramaiah will decide Seperate Lingayat Issue

ಬೆಂಗಳೂರು (ಮಾ. 18): ಚುನಾವಣೆ ಹೋಸ್ತಿಲ್ಲಿರುವ ರಾಜ್ಯ ಕರ್ನಾಟಕ. ಆದ್ರಿಗ ಚುನಾವಣೆ ಕಾವು ಏರುತ್ತಿದಂತೆ, ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗಾಗಿ ಪರ - ವಿರೋಧದ ಕಾವು ಅಷ್ಟೇ ಜೋರಾಗಿದೆ. ಈ ಮಧ್ಯೆ ಲಿಂಗಾಯತ ಪ್ರತ್ಯೇಕತೆಗಾಗಿ ತೋಂಟದಾರ್ಯ ಸ್ವಾಮೀಜಿ ಮತ್ತು ಚಿತ್ರದುರ್ಗ ಮುರಗ ಶ್ರೀಗಳ ನೇತೃತ್ವದ 300 ಕ್ಕೂ ಹೆಚ್ಚು ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮ ರಚನೆ ಆಗಲೇಬೇಕೆಂದು ಒತ್ತಡ ಹೇರಿದ್ದಾರೆ. 

ಸ್ವಾಮೀಜಿಗಳ ಮನವಿಯನ್ನು ಸಮಚಿತ್ತದಿಂದ ಆಲಿಸಿದ ಸಿಎಂ ಸಿದ್ದರಾಯಮಯ್ಯ ಆಶಾವಾದಿಗಳಾಗಿರಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯರ ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಮೂಡಿಸಿದೆ. ಕಾರಣ ನಾಳೆ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು ಸಿಎಂ ಸಿದ್ದರಾಮಯ್ಯರು ಯಾವ ತಿರ್ಮಾನಕ್ಕೆ ಬರ್ತಾರೆ ಎನ್ನುವ ಕುತೂಹಲ ಹೆಚ್ಚಿಸಿದೆ. 

 ಈಗಾಗಲೇ ವೀರಶೈವ ಮಹಾಸಭಾ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ಪ್ರತಿಕ್ರಿಯೆ ನೀಡಿರುವ ಸಚಿವ ವಿನಯ್ ಕುಲ್ಕರ್ಣಿ ಸಂಪುಟ ಸಹದ್ಯೋಗಿಗಳಿಗೆ ನೇರ ಸವಾಲು ಏಸೆದಿದ್ದಾರೆ. ಇಬ್ಬರು ಸಚಿವರು ರಾಜೀನಾಮೆ ನೀಡಿದ್ರೆ ಏನು ಆಗೋದಿಲ್ಲ ಎನ್ನುವ ಮೂಲಕ ಈಶ್ವರ ಖಂಡ್ರೆ, ಎಸ್ ಎಸ್ ಮಲ್ಲಿಖಾರ್ಜುನರಿಗೆ ಟಾಂಗ್ ನೀಡಿದ್ದಾರೆ.

ಉರಿಯುವ ಬೆಂಕಿಗೆ ತುಪ್ಪ ಸುರಿದ್ರು ಎನ್ನೋ ಹಾಗೆ ವಿನಯ್ ಕುಲ್ಕರ್ಣಿ ನೇರ ಮಾತು ಸಿದ್ದರಾಮಯ್ಯರಿಗೆ ತಲೆ ನೋವಾಗಿದೆ. ನಾಳಿನ ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ಪ್ರಹಸನದ ಮಾತು ಮತ್ತೆ ಕಿತ್ತಾಟಕ್ಕೆ ಕಾರಣವಾಗಬಹುದು. ಈ ಮಧ್ಯೆ ಚುನಾವಣೆ ಸಮಯದಲ್ಲಿ ಮತ್ತೆ ರಂಪಾಟ ಯಾಕೆಂದು, ಸಿಎಂ ಸಿದ್ದರಾಮಯ್ಯ ನಾಗಮೋಹನ್ ದಾಸ್ ನೀಡಿರುವ ವರದಿಗೆ ಪ್ರತಿಯಾಗಿ ಮತ್ತೊಂದು ಉಪ ಸಮಿತಿ ರಚಿಸಬಹುದು. ಆ ಮೂಲಕ ಸಮಯ ದೂಡುವ ತಂತ್ರಕ್ಕೆ ಮುಂದಾಗಬಹುದು.

 

Follow Us:
Download App:
  • android
  • ios