ಚುನಾವಣೆ ಹತ್ತಿರವಾಗ್ತಾ ಇದ್ದಂತೆ ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು ಈಗ ಸಿಎಂ ಸರದಿ: ದೇವಸ್ಥಾನಕ್ಕೆ ಎಡತಾಕಲು ಶುರು ಮಾಡಿದ್ರಾ ಸಿಎಂ?

CM Siddaramaiah Visit to Temple
Highlights

ಚುನಾವಣೆ ಹತ್ತಿರವಾಗುತ್ತಿದ್ದಂತೆ  ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು  ಈಗ ಸಿಎಂ ಸಿದ್ದರಾಮಯ್ಯ  ತವರಿನಲ್ಲಿ ಟೆಂಪಲ್ ರನ್ ಮಾಡಿದ್ದಾರೆ. 

ಮೈಸೂರು (ಮಾ. 29): ಚುನಾವಣೆ ಹತ್ತಿರವಾಗುತ್ತಿದ್ದಂತೆ  ರಾಹುಲ್ ಗಾಂಧಿ ಟೆಂಪಲ್ ರನ್ ಆಯ್ತು  ಈಗ ಸಿಎಂ ಸಿದ್ದರಾಮಯ್ಯ  ತವರಿನಲ್ಲಿ ಟೆಂಪಲ್ ರನ್ ಮಾಡಿದ್ದಾರೆ. 

ಚಾಮುಂಡೇಶ್ವರಿ ಕ್ಷೇತ್ರದಿಂದ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.  ಚಾಮುಂಡೇಶ್ವರಿ ಕ್ಷೇತ್ರದ ರಮ್ಮನಹಳ್ಳಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.  ಒಂದೇ ಗ್ರಾಮದ ಮೂರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಮೂರು ದೇವಾಲಯಗಳಲ್ಲೂ ಪೂಜೆ ಸಲ್ಲಿಸಿದ್ದಾರೆ.

ಹಣೆಗೆ ಆರತಿ ತಿಲಕ ಹಾಗೂ ಕುಂಕುಮ ಇಟ್ಟುಕೊಂಡಿದ್ದಾರೆ.  ಮಂಗಳಾರತಿ ಹಾಗೂ ಆರತಿ ತಟ್ಟೆಗೆ 500 ರೂ ದುಡ್ಡು ಹಾಕಿದರು.  ಈ ವೇಳೆ  ಸಿಎಂ ಕೈಯಲ್ಲಿ  ಸ್ಥಳೀಯರು ಬಲವಂತವಾಗಿ ಗಂಟೆ ಹೊಡೆಸಿದ್ದಾರೆ.  ಗಂಟೆ ಹೊಡೆಯಲು ಹೋಗುವ ವೇಳೆ ಜಾರಿ ಬೀಳುವುದಕ್ಕಾದರು.  ತಕ್ಷಣ ಸಿಎಂರನ್ನ  ಅಲ್ಲಿದ್ದವರು ಹಿಡಿದುಕೊಂಡರು. 

ಪುತ್ರ ಯತೀಂದ್ರ ಜೊತೆ ಗ್ರಾಮದ ಬೀದಿ ಬೀದಿಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ ಸಿಎಂ ಸಿದ್ದರಾಮಯ್ಯ.  ಸಿಎಂ ಹಾಗೂ ಯತೀಂದ್ರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದ್ದಾರೆ. 
 

loader