* ಆ.16ರಂದು ದೆಹಲಿಗೆ ಸಿದ್ದರಾಮಯ್ಯ ಪಯಣ* ಆ.17ರಂದು ಸೋನಿಯಾ, ರಾಹುಲ್ ಗಾಂಧಿ ಜೊತೆ ಸಿದ್ದು ಭೇಟಿ* ಸಂಪುಟ ವಿಸ್ತರಣೆಯ ದಿನಾಂಕದ ಕುರಿತು ಚರ್ಚೆ* ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ
ಬೆಂಗಳೂರು(ಆ. 15): ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗೆ ಮುಹೂರ್ತ ಫಿಕ್ಸ್ ಮಾಡಲು ಆ. 16ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಆ. 17ರಂದು ಸೋನಿಯಾ, ರಾಹುಲ್ ಭೇಟಿ ಮಾಡಲಿರುವ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ದಿನಾಂಕವನ್ನು ನಿಗದಿ ಮಾಡಿಕೊಂಡು ಬರಲಿದ್ದಾರೆ. ಇನ್ನು, ಅದೇ ದಿನ ಜೆಡಿಎಸ್ ಬಂಡಾಯ ಶಾಸಕರನ್ನು ಸಿದ್ದರಾಮಯ್ಯ ಹೈಕಮಾಂಡ್'ಗೆ ಭೇಟಿ ಮಾಡಿಸಿ ಕಾಂಗ್ರೆಸ್ ಸೇರ್ಪಡೆ ದಿನಾಂಕವನ್ನೂ ಅಂತಿಮಗೊಳಿಸಲಿದ್ದಾರೆ.
