ತಮ್ಮ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಮಾಡಿರುವ ಆರೋಪಗಳಿಗೆ, ಸಿಎಂ ಸಿದ್ದರಾಮಯ್ಯ ಟ್ವಿಟರ್’ನಲ್ಲಿ ಕಾರ್ಟೂನ್’ಗಳ ಮೂಲಕ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ತಮ್ಮ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಮಾಡಿರುವ ಆರೋಪಗಳಿಗೆ, ಸಿಎಂ ಸಿದ್ದರಾಮಯ್ಯ ಟ್ವಿಟರ್’ನಲ್ಲಿ ಕಾರ್ಟೂನ್’ಗಳ ಮೂಲಕ ತಿರುಗೇಟು ನೀಡಿದ್ದಾರೆ.
ಪಿಎನ್’ಬಿ ಹಗರಣಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲ್ಲಿ ಬ್ಯಾಂಕ್ ಹಾಗೂ ಲೆಕ್ಕಪರಿಶೋಧಕರನ್ನು ದೂರುತ್ತಿದ್ದಾರೆ. ಪ್ರಧಾನಿ ಮೌನಿಯಾಗಿದ್ದಾರೆ. ಬಹುಷ: ಹಗರಣಕ್ಕೆ, ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ಇಂದಿರಾ ಗಾಂಧಿ ಅಥವಾ ಪಿಎನ್’ಬಿಯನ್ನು ಸ್ಥಾಪಿಸಿದ ಲಾಲ ಲಜಪತ್ ರಾಯ್ ಅವರನ್ನು ಹೊಣೆಗಾರರನ್ನಾಗಿಸುವ ಬಗ್ಗೆ ಆಲೋಚನೆ ಮಾಡುತ್ತಿರಬಹುದು, ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಒಟ್ಟಾರೆಯಾಗಿ ಬೇರೆಯವರನ್ನು ದೂರುವುದು ಅವರ ಮಂತ್ರವಾಗಿದೆಯೆಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಿನ್ನೆ ಪಿಎನ್’ಬಿ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನು ಹೀಗೆ ಟೀಕಿಸಿದ್ದರು.
ನೋಟು ಅಮಾನ್ಯಮಾಡುವ ಮೂಲಕ ದೇಶದ ಜನತೆ ಸರತಿಯಲ್ಲಿ ನಿಂತು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಜಮೆ ಮಾಡುವಂತೆ ಮಾಡಿದಿರಿ. ಇದೀಗ ಜನರ ರೂ.12000 ಕೋಟಿ ಹಣದೊಂದಿಗೆ ನೀರವ್ ಮೋದಿ ಪರಾರಿಯಾಗುವಂತೆ ಮಾಡಿದಿರಿ, ಎಂದು ಟೀಕಿಸಿದ್ದರು.
