ನಮ್ಮದು ಅಭಿವೃದ್ದಿ ಅಜೆಂಡವಾದರೆ ಮೋದಿಯವರದ್ದು ಕೋಮುವಾದಿ ಅಜೆಂಡಾ: ಸಿಎಂ

First Published 24, Mar 2018, 2:53 PM IST
CM Siddaramaiah Slams PM Narendra Modi
Highlights

ಚುನಾವಣೆ ಭಾಷಣ ಮಾಡಲಿಕ್ಕಾಗಿ ನರೇಂದ್ರಮೋದಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಬರುತ್ತಾರೆ.  ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಅವರು ಅಭಿವೃದ್ದಿ  ಬಗ್ಗೆ  ಮಾತನಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು (ಮಾ.24): ಚುನಾವಣೆ ಭಾಷಣ ಮಾಡಲಿಕ್ಕಾಗಿ ನರೇಂದ್ರಮೋದಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಬರುತ್ತಾರೆ.  ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಅವರು ಅಭಿವೃದ್ದಿ  ಬಗ್ಗೆ  ಮಾತನಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ನಮ್ಮದು ಅಭಿವೃದ್ದಿ ಅಜೆಂಡಾ. ಅವರದ್ದು ಕೋಮುವಾದಿ ಅಜೆಂಡಾ. ಬಿಜೆಪಿಯವರು ಮೂರು ಜನ ಮುಖ್ಯಮಂತ್ರಿ ಆಗಿದ್ದರೂ  ಸುಭದ್ರ ಸರಕಾರ ನೀಡುವುದಕ್ಕೆ ಆಗಲಿಲ್ಲ. ನಾವು ಐದು ವರ್ಷದಲ್ಲಿ ಸುಭದ್ರ ಸರಕಾರ ನೀಡಿದ್ದೇವೆ. ನರೇಂದ್ರ ಮೋದಿಯವರು ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಉದ್ಯಮಿಗಳು ಸಾವಿರಾರು ಕೋಟಿ ಹಣ ಲೂಟಿ ಹೊಡೆದು ವಿದೇಶಕ್ಕೆ ಓಡಿ ಹೋದರು. ಮೋದಿ ಚೌಕಿದಾರರಾಗಿ ಏಕೆ ಅವರನ್ನು ತಡೆಯಲು ಆಗಲಿಲ್ಲ.  ಬಿಜೆಪಿಯವರಿಗೆ ಒಂದು ನಾಲಿಗೆ ಇಲ್ಲ.  ಹೇಳೋದು ಒಂದು ಮಾಡೋದು ಇನ್ನೊಂದು.  ಅಚ್ಚೆ ದಿನ್ ಯಾರಿಗೆ ಬಂದಿದೆ? ಮಲ್ಯ, ಲಲಿತ್‌ ಮೋದಿ, ಅಂಬಾನಿ, ಅದಾನಿ, ಜೈಷಾ ಅವರಿಗೆ ಬಂದಿದೆ. ಧೀನ ದಲಿತರಿಗೆ, ಬಡವರಿಗೆ ಅಚ್ಚೆದಿನ್ ಬಂದಿಲ್ಲ ಎಂದು ಸಿಎಂ ಹೇಳಿದ್ದಾರೆ.  

loader