ಸಿಎಂ‌‌ ಆದ  24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗ, ಅವರ ತಂದೆ ಸಿಎಂ ಆಗಿದ್ದಾಗ ಏಕೆ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಎಚ್’ಡಿಕೆಗೆ  ನೇರ ಪ್ರಶ್ನೆ ಕೇಳಿದ್ದಾರೆ. 

ಹಾಸನ (ಮಾ. 22): ಸಿಎಂ‌‌ ಆದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಅವರು ಸಿಎಂ ಆಗಿದ್ದಾಗ, ಅವರ ತಂದೆ ಸಿಎಂ ಆಗಿದ್ದಾಗ ಏಕೆ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಎಚ್’ಡಿಕೆಗೆ ನೇರ ಪ್ರಶ್ನೆ ಕೇಳಿದ್ದಾರೆ. 

ದಲಿತರನ್ನು, ಮುಸ್ಲಿಂರನ್ನು‌ ಡಿಸಿಎಂ ಮಾಡುತ್ತೇವೆ ಅಂತಿದ್ದಾರೆ. ಆದರೆ ದಲಿತರನ್ನು‌ ಸಿಎಂ ಮಾಡುತ್ತೇವೆ ಎಂದು ದೇವೇಗೌಡರು ಹೇಳಲಿ ಎಂದು ಸವಾಲು ಹಾಕಿದ್ದಾರೆ. 

ಹಾಸನದಲ್ಲಿ ‌7 ಕ್ಕೆ 7 ಸ್ಥಾನ‌ ಗೆಲ್ಲಿಸಿದ್ರೆ ನೀವು ಇತಿಹಾಸ ಬರೆಯುತ್ತೀರಿ. ಜೆಡಿಎಸ್'ನವರು ಸುಳ್ಳು ಹೇಳಿ ಜನರಿಗೆ ಮೋಸ ಮಾಡಲು ಆಗಲ್ಲ. ಯಡಿಯೂರಪ್ಪ ನಾನೇ‌ ಸಿಎಂ‌ ಅನ್ನುತ್ತಿದ್ದಾರೆ. ಬಿಜೆಪಿ 150 ಮಿಶನ್ ಮಾತು ಈಗ 50 ಕ್ಕೆ ಇಳಿದಿದೆ. ಬಿಜೆಪಿಯವರು ಏನೇ ತಂತ್ರಗಾರಿಕೆ ಮಾಡಲಿ, ಕುಮಾರಸ್ವಾಮಿ ಭ್ರಮೆಯಲ್ಲಿರಲಿ, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.