ಇಲ್ಲಿನ ತಿರುಮಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಂಬರೀಶ್‌ ಸ್ವತಃ ವೇದಿಕೆ ಮೇಲೆ ನಿಂತು ಅಭಿಮಾನಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿಸಿದರು. ಬಳಿಕ ಮಾತ ನಾಡಿದ ಅವರು, ‘ಮುಖ್ಯಮಂತ್ರಿ ಜತೆ ವೈಮನಸ್ಸು ಇಲ್ಲವೇ ಇಲ್ಲ. ಸಾಮಾಜಿಕ ನ್ಯಾಯ ನೀಡುವ ಮುಖ್ಯಮಂತ್ರಿ ಅವರು' ಎಂದು ಹೊಗಳಿದರು.ಮಳವಳ್ಳಿಯಲ್ಲಿ ಕಪ್ಪುಬಾವುಟ ಪ್ರದರ್ಶನದ ಬಳಿಕ ಉಂಟಾದ ರಾದ್ಧಾಂತದಿಂದ ಎಚ್ಚೆತ್ತುಕೊಂಡ ಪೊಲೀಸರು ಸೋಮವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದ ಜಿಲ್ಲೆಯ ಕೆಲ ದಲಿತ ನಾಯಕರು ಹಾಗೂ ಬಿಜೆಪಿ ನಾಯಕನೊಬ್ಬನನ್ನು ವಶಕ್ಕೆ ಪಡೆದು ಬಳಿಕ, ಬಿಡುಗಡೆಗೊಳಿಸಿದ್ದಾರೆ.
ಮಂಡ್ಯ: ಬಹಳ ವರ್ಷಗಳಿಂದ ರಾಜ್ಯ ಪ್ರವಾಸ ಮಾಡುತ್ತಲೇ ಇರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿಗೆ ಹಿಂದುಳಿದವರು, ದಲಿತರು ಹೋಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುತ್ತಿರುವುದು ಇದು ಮೊದಲೇನಲ್ಲ. ಹಿಂದುಳಿದವರು ಮತ್ತು ದಲಿತರು ಇವರ ಕಡೆಗೆ ಹೋಗುತ್ತಿಲ್ಲ. ಇವರು ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿ ಎಂದು ಎಲ್ಲರಿಗೂ ಗೊತ್ತು ಎಂದರು.
4 ವರ್ಷದ ಆಡಳಿತಕ್ಕೆ ನಂಜನಗೂಡು, ಗುಂಡ್ಲುಪೇಟೆ ಮತದಾರರು ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಬಿಎಸ್ವೈ ಮರೆಯಬಾರದು. ಕಾಂಗ್ರೆಸ್ ಸರ್ಕಾರ ಭ್ರಷ್ಟಎಂದು ಆರೋಪಿಸುವ ಮುನ್ನ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಶೋಭಾ ಕರಂದ್ಲಾಜೆ ಇವರೆಲ್ಲ ತಮ್ಮ ಬೆನ್ನು ನೋಡಿಕೊಳ್ಳಬೇಕು. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಬಹುಸಂಖ್ಯಾತ ವೀರಶೈವ ಸಮಾಜವನ್ನು ತುಳಿಯುತ್ತಿದೆ ಎಂಬ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಆರೋಪವನ್ನು ತಳ್ಳಿಹಾಕಿದ ಸಿದ್ದರಾಮಯ್ಯ, ಜಾತಿಗಣತಿ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದರು.
