ಶಾಂತಿ ಕದಡಲು ಮಂಗಳೂರು ಚಲೋ ನಡೆಸುವ ಬದಲು ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿ.ಎಸ್. ಯಡಿಯೂರಪ್ಪ ದೆಹಲಿ ಚಲೋ ನಡೆಸಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಬಳ್ಳಾರಿ: ಶಾಂತಿ ಕದಡಲು ಮಂಗಳೂರು ಚಲೋ ನಡೆಸುವ ಬದಲು ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿ.ಎಸ್. ಯಡಿಯೂರಪ್ಪ ದೆಹಲಿ ಚಲೋ ನಡೆಸಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಮತ್ತು ₹2995 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಂಗಳವಾರ ಅವರು ಮಾತನಾಡಿ ರೈತರ ಸಾಲ ಮನ್ನಾ ಮಾಡದ ಯಡಿಯೂರಪ್ಪ ಯಾವ ರೀತಿಯಲ್ಲೂ ಮಣ್ಣಿನ ಮಗ ಅಲ್ಲ ಎಂದು ಹೇಳಿದರು.

ಇದೇವೇಳೆ ದೇವೇಗೌಡ, ಕುಮಾರಸ್ವಾಮಿ ಅಷ್ಟೇ ಮಣ್ಣಿನ ಮಕ್ಕಳಲ್ಲ, ನಾನೂ ಮಣ್ಣಿನ ಮಗ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಲೂಟಿ ಮಾಡಿದರು ಎಂದರು.